Home Important ರವಿ ಬೆಳಗೆರೆ ಬಂಧನಕ್ಕೂ ಗೌರಿ ಹತ್ಯೆಗೂ ಸಂಬಂಧವಿದೆಯೇ….?

ರವಿ ಬೆಳಗೆರೆ ಬಂಧನಕ್ಕೂ ಗೌರಿ ಹತ್ಯೆಗೂ ಸಂಬಂಧವಿದೆಯೇ….?

SHARE

ಬೆಂಗಳೂರು : ಪತ್ರಕರ್ತ ರವಿ ಬೆಳಗೆರೆ ಬಂಧನದ ಹಾಗೂ ನಡೆಯುತ್ತಿರುವ ತನಿಖೆ ಕುರಿತಂತೆ ನಾನು ಪ್ರತಿಕ್ರಿಯೆ ಕೊಡುವುದು ಸರಿಯಲ್ಲ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಸುವರ್ಣಸೌಧದಲ್ಲಿ ಮಾತನಾಡಿದ ಅವರು ಈ ಬೆಳವಣಿಗೆ ಕುರಿತಂತೆ ಪೊಲೀಸ್ ಆಯುಕ್ತರು ಅಥವಾ ಸಿಸಿಬಿಯವರು ಮಾಹಿತಿ ನೀಡುತ್ತಾರೆ ಎಂದಿದ್ದಾರೆ. ತಾಹೀರ್ ನನ್ನು ಪೊಲೀಸರು ಬಂಧಿಸಿದಾಗ ಸುಪಾರಿ ಕಿಲ್ಲರ್ ಶಶಿಧರ್ ಮುಂಡೇವಾಡಗೆ ಗನ್ ಮಾರಿದ್ದ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ತಾಹೀರ್ ಕೇವಲ ವೆಪನ್ ಸೆಲ್ಲರ್ ಆಗಿದ್ದು ಈ ವೇಳೆ ಮುಂಡೇವಾಡ ಹೆಸರು ಪ್ರಸ್ತಾಪವಾಗಿದೆ.

ಆಗ ಶಶಿಧರ್ ಮುಂಡೇವಾಡನನ್ನು ವಶಕ್ಕೆ ತೆಗೆದುಕೊಂಡ ವಿಚಾರಣೆ ನಡೆಸಿದಾಗ ಗೌರಿ ಹತ್ಯೆಯಲ್ಲಿ ನನ್ನ ಪಾತ್ರವಿಲ್ಲ, ಆದ್ರೆ ಬೇರೆ ಪತ್ರಕರ್ತನ ಹತ್ಯೆಗೆ ಸಿದ್ದತೆ ನಡೆಸಿದ್ದೇನೆ ಅನ್ನುವುದನ್ನು ಬಾಯಿ ಬಿಟ್ಟಿದ್ದಾನೆ. ಇದರ ಮುಂದುವರಿದ ಭಾಗವಾಗಿ ಪೊಲೀಸರು ರವಿ ಬೆಳಗೆರೆಯನ್ನು ಬಂಧಿಸಿದ್ದಾರೆ ಎಂದು ಹೇಳಿರುವ ಗೃಹ ಸಚಿವರು ಬೆಳಗೆರೆ ಬಂಧನಕ್ಕೂ ಗೌರಿ ಹತ್ಯೆ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.