Home Local ಪರೇಶ್ ಮೇಸ್ತನ ಸಾವಿಗೆ ಸರ್ಕಾರ ಕಾರಣೆಂದು ಆರೋಪಿಸಿ ಕಾರವಾರದಲ್ಲಿ ಪ್ರತಿಭಟನೆ.

ಪರೇಶ್ ಮೇಸ್ತನ ಸಾವಿಗೆ ಸರ್ಕಾರ ಕಾರಣೆಂದು ಆರೋಪಿಸಿ ಕಾರವಾರದಲ್ಲಿ ಪ್ರತಿಭಟನೆ.

SHARE

ಕಾರವಾರ: ಹೊನ್ನಾವರದ ಗಲಭೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪರೇಶ್ ಮೇಸ್ತ ಅವರ ಸಾವಿಗೆ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿ ಹಾಗೂ‌ ರಾಜ್ಯ ಸರ್ಕಾರದ ವಿರುದ್ಧ ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ನಗರದ ಸುತ್ತ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.

ರಾಜ್ಯ ಸರ್ಕಾರದ ವಿರುದ್ಧ, ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ಘೋಷಣೆಗಳನ್ನು ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಹಾಕಲಾಗಿದ್ದ ಕಾಂಗ್ರೆಸ್ ನ ಬಾವುಟಗಳನ್ನು ಕಾರ್ಯಕರ್ತರು ಕಿತ್ತೆಸೆದಿದ್ದಾರೆ. ಕೋರ್ಟ್ ಬಳಿಯ ವೃತ್ತದಲ್ಲಿ ಹಾಕಲಾಗಿದ್ದ ಕಾಂಗ್ರೆಸ್ ನ ಫ್ಲೆಕ್ಸ್ ಕಿತ್ತೆಸೆಯಲು ಆರಂಭಿಸಿದಾಗ ಪೊಲೀಸರು ತಡೆದರು. ಅಲ್ಲಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿತ್ತು.

ಬಳಿಕ ಮಿತ್ರ ಸಮಾಜದಲ್ಲಿ ನೆರೆದ ಕಾರ್ಯಕರ್ತರು ಸೋಮವಾರ ನಗರದಲ್ಲಿ ಸೋಮವಾರ ಸ್ವಯಂ ಪ್ರೇರಿತ ಅಂಗಡಿ, ಮುಂಗಟ್ಟುಗಳನ್ನು ಮುಚ್ಚುವುದಾಗಿ ತಿಳಿಸಿದರು.
ಪ್ರಮುಖರಾದ ನಾಗರಾಜ ನಾಯಕ, ರೂಪಾಲಿ ನಾಯ್ಕ, ಮನೋಜ್ ಭಟ್, ಬಿ.ಜಿ.ಮೋಹನ್, ರಾಜೇಶ ನಾಯಕ, ಗಂಗಾಧರ ಭಟ್ ಇದ್ದರು.