Home Photo news ಟಿ ಎಸ್ ಎಸ್‍ಗೆ ನಟ ಉಪೇಂದ್ರ ಭೇಟಿ

ಟಿ ಎಸ್ ಎಸ್‍ಗೆ ನಟ ಉಪೇಂದ್ರ ಭೇಟಿ

SHARE

ಶಿರಸಿ: ಚಿತ್ರನಟ ಉಪೇಂದ್ರ ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಟಿ.ಎಸ್.ಎಸ್ ಸಂಘಕ್ಕೆ ಬೇಟಿ ನೀಡಿ ಸಂಘದ ಎಲ್ಲಾ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿ, ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿ, ಎಲ್ಲಾ ಬೆಳೆಯಲ್ಲೂ ಟಿ.ಎಸ್.ಎಸ್. ಮಾದರಿಯ ವ್ಯವಸ್ಥೆ ಅಳವಡಿಸಿಕೊಂಡರೆ ರೈತರ ಏಳಿಗೆ ಸಾಧ್ಯವೆಂದರು.

ಈ ಸಂದರ್ಭದಲ್ಲಿ ಟಿ.ಎಸ್.ಎಸ್.ನ ಅಧ್ಯಕ್ಷ ಶಾಂತಾರಾಮ ವಿ. ಹೆಗಡೆ ಶೀಗೇಹಳ್ಳಿ, ಟಿ.ಎಸ್.ಎಸ್. ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ, ಆಡಳಿತ ಮಂಡಳಿಯ ನಿರ್ದೇಶಕ ಸಿ.ಎನ್.ಹೆಗಡೆ ಹಾಗೂ ಟಿಎಸ್‍ಎಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.