Home Important ಕದಡಿತೇ ಕರ್ನಾಟಕದ ಶಾಂತಿ? ಸಾಲು ಸಾಲು ಕೊಲೆಗಳಿಗೆ ಮುಕ್ತಾಯ ಯಾವಾಗ?

ಕದಡಿತೇ ಕರ್ನಾಟಕದ ಶಾಂತಿ? ಸಾಲು ಸಾಲು ಕೊಲೆಗಳಿಗೆ ಮುಕ್ತಾಯ ಯಾವಾಗ?

SHARE

ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ದಿನದಿಂದ ದಿನಕ್ಕೆ ಕೈಮಿರಿ ಹೋಗುತ್ತಿದೆ. ಸಾಲು ಸಾಲು ಹಿಂದೂ ಸಂಘಟನೆಯ ಕಾರ್ಯಕರ್ತರ ಹತ್ಯೆ, ಸಾಹಿತಿಗಳ ಹತ್ಯೆ, ಸಾಮಾನ್ಯರು ಅಷ್ಟೇ ಅಲ್ಲಾ ಕಾನೂನು ಸುವ್ಯವಸ್ಥೆ ಕಾಪಾಡುವ ಪೋಲಿಸರು ಸಹ ಆತ್ಮಹತ್ಯೆ, ಗುಂಡೆಟಿಗೆ ಬಲಿಯಾಗುತ್ತಿದ್ದಾರೆ.

ಈಗ ಯಾಕೆ ಈ ವಿಷಯ ಅಂತಿರಾ.? ಕಾರಣ ಇದೆ.
ಮಂಗಳೂರಿನ ಸಂಜೀವ ಶೆಟ್ಟಿ ಅವರ ಬಟ್ಟೆ ಅಂಗಡಿಗೆ ಬೈಕ್ ನಲ್ಲಿ ಬಂದ ಯಮಧೂತರು ಅಂಗಡಿ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ದುಷ್ಕರ್ಮಿಗಳ ದಾಳಿಯಲ್ಲಿ ಓರ್ವ ಬಟ್ಟೆ ಅಂಗಡಿಯ ಸಿಬ್ಬಂದಿ ಮಹಾಬಲ ಎಂಬುವರ ಕಾಲಿಗೆ ಗುಂಡು ತಗಲಿದೆ. ಭೂಗತ ಪಾತಕಿಗಳು ಹಫ್ತಾ ವಸೂಲಿಯ ವಿಷಯದಲ್ಲಿ ಕೃತ್ಯ ಎಸಿಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಮಂಗಳೂರು ಬಂದರು ಠಾಣಾ ವ್ಯಾಪ್ತಿಯಲ್ಲಿ ಈ ದಾಳಿ ನಡೆದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ಬರಬೇಕಾಗಿದೆ.

ಮಂಗಳೂರಿನಲ್ಲಿ ಶೂಟೌಟ್, ಹೊನ್ನಾವರದಲ್ಲಿ ಹಿಂದೂ ಯುವಕನ ಹತ್ಯೆ, ಉಡುಪಿಯಲ್ಲಿ ಮುಸ್ಲಿಮರಿಂದ ಹಿಂದೂ ಯುವಕನ ಮೇಲೆ ಹಲ್ಲೆ. ಪ್ರತಿದಿನ ಬರಿ ಇಂತಹ ಸುದ್ದಿಗಳನ್ನೇ ಕೇಳಬೇಕಾಗಿದೆ. ಇಷ್ಟೆಲ್ಲಾ ಅನಾಹುತಗಳು ನಡೆಯುತ್ತಿದ್ದರು ನಮ್ಮ ನಾಡಿನ ದೊರೆ ಇನ್ನೂ ನಿದ್ದೆಯಿಂದ ಎದ್ದಿಲ್ಲಾ ಅಂತ ಕಾಣಿಸುತ್ತೆ.

ಮುಸ್ಲಿಂ ಮತಾಂಧರಿಂದ ಹಿಂದು ಯುವಕನ ಮೇಲೆ ಮಾರಣಾಂತಿಕ ಹಲ್ಲೆ..

ಉಡುಪಿ ಜಿಲ್ಲೆಯ ಹೂಡೆಯ ನಿವಾಸಿಯಾದ “ನಿಖಿತ್ ಪೂಜಾರಿ” ಎಂಬ ಹಿಂದೂ ಯುವಕನ‌ ಮೇಲೆ ಅದೇ ಊರಿನ ಕಿಡಿಗೇಡಿ ಮುಸ್ಲಿಂ ಯುವಕರಿಂದ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿದ್ದು, ಹಲ್ಲೆಗೊಳಗಾದ ವ್ಯಕ್ತಿಗೆ ತೀವ್ರ ಸ್ವರೂಪದ ಗಾಯಗಳಾಗಿರುವುದರಿಂದ ಹಿಂದೂ ಯುವಕನನ್ನು ಮಣಿಪಾಲದ ಕೆ.ಎಮ್. ಸಿ. ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೊನ್ನಾವರದಲ್ಲಿ ಹಿಂದೂ ಯುವಕನ ಹತ್ಯೆ..!!

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮೀನುಗಾರ ಸಮುದಾಯದ ಮುಂದಾಳು ಆಗಿದ್ದ ಪರೇಶ್ ಮೇಸ್ತ ಎಂಬ 20 ವರ್ಷದ ಯುವ ಕಾರ್ಯಕರ್ತನನ್ನು ಜಿಹಾದಿ ಮುಸ್ಲಿಂ ಗೂಂಡಾಗಳು ಹತ್ಯೆಗೈದಿದ್ದಾರೆ. ಈ ಪ್ರಕರಣದ ತನಿಖೆಯನ್ನು ಸರಿಯಾಗಿ ನಡೆಸದ ಪೊಲೀಸ್ ಇಲಾಖೆ ಕೊಲೆ ಆರೋಪಿಗಳ ಜೊತೆ ಸೇರಿ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಸ್ಥಳೀಯರು ಪ್ರತಿಭಟನೆ ವೇಳೆ ದೂರಿದ್ದು ಕಂಡುಬಂತು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಕ್ಕೆ ಅಡ್ಡಿಯಾಗಬಾರದೆಂದು ಶವವನ್ನು ಮುಚ್ಚಿಟ್ಟು ಅಮಾನವೀಯತೆಯ ಪರಮಾವಧಿಯನ್ನು ನಡೆಸಿರುವ ರಾಜ್ಯ ಸರ್ಕಾರದ ವರ್ತನೆಗೆ ಸ್ಥಳಿಯರು ಕೆಂಡಾಮಂಡಳವಾಗಿದ್ದಾರೆ.

ಹೊನ್ನಾವರದಲ್ಲಿನ ಶನಿಃಶ್ವರ ದೇವಸ್ಥಾನದ ಜಾಗವನ್ನು ಅತಿಕ್ರಮಿಸಿ ಮಸೀದಿ ಜಾಗ ಮಾಡ ಹೊರಟ ವಿರುದ್ಧ ಹಾಗು ರಂಜಾನ್ ದಿನ ಹಿಂದೂಗಳ ವಿರುದ್ಧ ಆಕ್ರಮಣ ನಡೆದಾಗ ಅದನ್ನು ಪ್ರತಿಭಟಿಸುವ ಹೋರಾಟದ ಮುಂದಾಳುತ್ವ ವಹಿಸಿದ್ದ ಕಾರಣದಿಂದ ಪರೇಶ್ ಮೇಸ್ತರವರನ್ನು ಕೊಲೆ ಮಾಡಲಾಗಿದೆ ಎಂದು ಕೆಲವು ಸ್ಥಳೀಯರ ಹೇಳಿಕೆಗಳಿಂದ ತಿಳಿದುಬಂದಿದೆ.