Home Information ದಿ.13 ರಂದು ವಾಲ್ಮೀಕಿ ಮಹರ್ಷಿ ಕುರಿತು ಭಾಷಣ ಸ್ಪರ್ಧೆ

ದಿ.13 ರಂದು ವಾಲ್ಮೀಕಿ ಮಹರ್ಷಿ ಕುರಿತು ಭಾಷಣ ಸ್ಪರ್ಧೆ

SHARE

ಕುಮಟಾ: ಇಲ್ಲಿಯ ಸಂಸ್ಕøತಿ ಉಪನ್ಯಾಸ ವೇದಿಕೆ ಹಾಗೂ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ವಿವಿಧ ಭಾಷಾ ಸಂಘಗಳಡಿ ಮಹರ್ಷಿ ವಾಲ್ಮೀಕಿಯ ಕುರಿತು ಭಾಷಣ ಸ್ಪರ್ಧೆ ಏರ್ಪಡಿಸಿದ್ದು ಬಹುಮಾನ ವಿತರಣಾ ಸಮಾರಂಭವನ್ನು ದಿ.13, ಅಪರಾಹ್ನ 3 ಗಂಟೆಗೆ, ಚಿತ್ರಿಗಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಉದ್ಘಾಟಕರಾಗಿ ಜೀವೋತ್ತಮ ಪತ್ರಿಕೆಯ ಸಂಪಾದಕ ಪ್ರೊ. ರಮಾಕಾಂತ ಶಾನಭಾಗ ಅತಿಥಿಗಳಾಗಿ ರಮಣ ಮುದ್ರಣಾಲಯದ ಮಾಲಕ, ರೋಟರಿಯ ಮಾಜಿ ಅಧ್ಯಕ್ಷ ಗುರುದಾಸ ಗಾಯ್ತೊಂಡೆ ಆಗಮಿಸಲಿದ್ದು, ಮುಖ್ಯಾಧ್ಯಾಪಕ ಎನ್.ಆರ್.ಗಜು ಅಧ್ಯಕ್ಷತೆ ವಹಿಸಲಿದ್ದಾರೆಂದು ಸಂಸ್ಕøತಿ ಉಪನ್ಯಾಸ ವೇದಿಕೆಯ ಅಧ್ಯಕ್ಷ ಹಿರಿಯ ಅಂಕಣಕಾರ ಮತ್ತು ಪತ್ರಕರ್ತ ಪ್ರೊ.ವಿಷ್ಣು ಜೋಶಿ ತಿಳಿಸಿದ್ದಾರೆ.