Home Important ಬೆಳಗೆರೆಗೆ ಭೂಗತ ಲೋಕದ ನಂಟಿದೆ – ಸುನಿಲ್ ಹೆಗ್ಗರವಳ್ಳಿ ಗಂಭೀರ ಆರೋಪ

ಬೆಳಗೆರೆಗೆ ಭೂಗತ ಲೋಕದ ನಂಟಿದೆ – ಸುನಿಲ್ ಹೆಗ್ಗರವಳ್ಳಿ ಗಂಭೀರ ಆರೋಪ

SHARE

ಬೆಂಗಳೂರು : ಸುಪಾರಿ ನೀಡಿದ ಆರೋಪದಲ್ಲಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಪತ್ರಕರ್ತ ರವಿಬೆಳಗೆರೆಗೆ ಭೂಗತಲೋಕದ ನಂಟಿದೆ ಎಂದು ಸುನಿಲ್ ಹೆಗ್ಗರವಳ್ಳಿ ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ಭೇಟಿಗೂ ಮುನ್ನ ಮಾತನಾಡಿದ ಅವರು ನಾನು ಒಮ್ಮೆ ಸಾವಿನ ಹತ್ತಿರಕ್ಕೆ ಹೋಗಿ ಬಂದಿದ್ದೇನೆ.ಹಾಗಾಗಿ ಭದ್ರತೆ ಕೇಳ್ತಾ ಇದ್ದೀನಿ. ನನ್ನ ಕೊಲೆಗೆ ಸುಪಾರಿ ನೀಡಿರುವ ರವಿ ಬೆಳಗೆರೆ ಪ್ರಭಾವಿ ವ್ಯಕ್ತಿಯಾಗಿದ್ದು ಅವರಿಗೆ ಭೂಗತ ಲೋಕದ ನಂಟಿದೆ. ಹೀಗಾಗಿ ಅವರು ಜೈಲಲ್ಲೇ ಇರಲಿ ಹೊರಗೆ ಇರಲಿ ‌ನನ್ನ ಜೀವಕ್ಕೆ ಅಪಾಯ ಮಾಡುವ ಆತಂಕವಿದೆ. ನನಗೆ ವಯಸ್ಸಾದ ತಂದೆ ತಾಯಿ ಇದ್ದಾರೆ. ಆದ್ರೆ ನಾಲ್ಕೈದು ಗನ್ ಮ್ಯಾನ್ ಇಟ್ಟುಕೊಳ್ಳುವ ಸಾಮರ್ಥ್ಯ ನನಗಿಲ್ಲ. ಹೀಗಾಗಿ ಪೊಲೀಸ್ ರಕ್ಷಣೆ ನೀಡುವಂತೆ ಸಿಎಂಗೆ ಮನವಿ ಮಾಡುವುದಾಗಿ ಹೇಳಿದರು.

ಬಳಿಕ ಮುಖ್ಯಮಂತ್ರಿಗಳನ್ನು ಭೇಟಿಯಾದ ಹೆಗ್ಗರವಳ್ಳಿ ಭದ್ರತೆ ಒದಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು. ಈ ವೇಳೆ ಮುಖ್ಯಮಂತ್ರಿ ಸಕಾರತ್ಮಾಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದು ಬಂದಿದೆ.