Home Local ಉತ್ತರಕನ್ನಡ ಜಿಲ್ಲೆ ಉದ್ವಿಗ್ನ : ನಿಲ್ಲದ ಹಿಂಸಾಚಾರ

ಉತ್ತರಕನ್ನಡ ಜಿಲ್ಲೆ ಉದ್ವಿಗ್ನ : ನಿಲ್ಲದ ಹಿಂಸಾಚಾರ

SHARE

ಶಿರಸಿ: ಹೊನ್ನಾವರದಲ್ಲಿ ಪರೇಶ ಮೆಸ್ತ ಸಾವನ್ನು ಖಂಡಿಸಿ ಹಿಂದೂ ಪರ ಸಂಘಟನೆಗಳು ನಡೆಸಿದ ಪ್ರತಿಭಟನೆಯಿಂದ ಉತ್ತರಕನ್ನಡ ಜಿಲ್ಲೆ ಉದ್ವಿಗ್ನಗೊಂಡಿದೆ.

ಬಿಗಿ ಬಂದೋಬಸ್ತ್ ಮಧ್ಯೆಯೂ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಪ್ರಯೋಗಿಸಿದ್ದಾರೆ.

ಅಗ್ನಿ ಶಾಮಕದಳ ವಾಹನ ಸೇರಿ 6 ವಾಹನಗಳು ಜಖಂಗೊಂಡಿವೆ. ಮಾಧ್ಯಮದವರ ಮೇಲೂ ಕಲ್ಲು ತೂರಾಟ ನಡೆದಿದ್ದು, ಇಬ್ಬರು ಪತ್ರಕರ್ತರಿಗೆ ಗಾಯಗಳಾಗಿವೆ. ನಿಷೇಧಾಜ್ಞೆ ಮಧ್ಯೆಯೂ ನಗರದ ಕೋರ್ಟ್ ರಸ್ತೆ, ವಿಕಾಸಾಶ್ರಮ ಮೈದಾನದ ಎದುರು ಸೇರಿದಂತೆ ಹಲವೆಡೆ ಕಲ್ಲು ತೂರಾಟ ನಡೆದಿದೆ. ರಸ್ತೆ ಮಧ್ಯೆ ಟೈರ್ ಸುಟ್ಟು ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಪರಿಸ್ಥಿತಿ ಸುಧಾರಿಸಲು ಪೊಲೀಸರು ಹರಸಾಹನ ಪಡುತ್ತಿದ್ದಾರೆ.