Home Local ಹೊನ್ನಾವರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹುಟ್ಟು ಹಬ್ಬ ಆಚರಣೆ

ಹೊನ್ನಾವರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹುಟ್ಟು ಹಬ್ಬ ಆಚರಣೆ

SHARE

ಹೊನ್ನಾವರ: ಇಂದು ಬೆಳಿಗ್ಗೆ 10 ಗಂಟೆಗೆ ಹೊನ್ನಾವರದ ಮೂಡಗಣಪತಿ ದೇವಸ್ತಾನದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ 59 ನೇ ಹುಟ್ಟು ಹಬ್ಬದ ನಿಮಿತ್ತ ವಿಶೇಷ ಪೂಜೆಯನ್ನು ಕಾರ್ಯಕರ್ತರು ಸಲ್ಲಿಸಿದರು.

ಕುಮಾರಸ್ವಾಮಿಯವರ ಆಯಸ್ಸು ಆರೋಗ್ಯ ವೃದ್ಧಿಸಲೆಂದು ಪ್ರಾರ್ಥಿಸಿದ ಜೆ.ಡಿ.ಎಸ್ ಕಾರ್ಯಕರ್ತರು ನಂತರ ತಾಲೂಕು ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು, ಬ್ರೇಡ್ ವಿತರಿಸಿದರು.

ಆರೋಗ್ಯಾಧಿಕಾರಿ ಡಾ. ರಾಜೇಶ್ ಕಿಣಿ ಸಹಕರಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಜಿ. ಎನ್. ಗೌಡ, ಜೆಡಿಎಸ್ ಮುಖಂಡರಾದ ರಾಜು ನಾಯ್ಕ ಮಂಕಿ, ತಾ. ಪಂ. ಸದಸ್ಯ ತುಕಾರಾಮ ನಾಯ್ಕ, ತಿಮ್ಮಪ್ಪ ಮೇಸ್ತ, ಜಗದೀಶ್ ತಾಂಡೇಲ್, ಬಾಲಕ್ರಷ್ಣ ಗೌಡ, ಸತೀಶ್ ಗೌಡ, ಸಂತೋಷ ಗೌಡ, ಕ್ರಷ್ಣ ನಾಯ್ಕ, ಮನು ನಾಯ್ಕ, ಜಿ. ಎಸ್. ಗೌಡ, ಗಣಪತಿ ಗೌಡ, ಕ.ರ.ವೇ ಅಧ್ಯಕ್ಷ ಮಂಜುನಾಥ್ ಗೌಡ ಇತರರು ಉಪಸ್ಥಿತರಿದ್ದರು.