Home Local ಹಿಂದೂ ಯುವಕರ ಮೇಲೆ ಸುಳ್ಳು ಪ್ರಕರಣ ಖಂಡಿಸಿದಎಲ್ ಆರ್ ಭಟ್ಟ ತೋಟ್ಮನೆ.

ಹಿಂದೂ ಯುವಕರ ಮೇಲೆ ಸುಳ್ಳು ಪ್ರಕರಣ ಖಂಡಿಸಿದಎಲ್ ಆರ್ ಭಟ್ಟ ತೋಟ್ಮನೆ.

SHARE

ಯಲ್ಲಾಪುರ; ಹಿಂದು ಯುವಕರ ವಿರುದ್ದ ಸುಳ್ಳು ಪ್ರಕರಣ ದಾಖಲಿಸಿದರೆ ನಾವು ಸುಮ್ಮನೆ ಕೂರುವುದಿಲ್ಲ ಎಂದು ವಿ ಎಚ್ ಪಿ ಮುಖಂಡ ಎಲ್ ಆರ್ ಭಟ್ಟ ತೋಟ್ಮನೆ ಹೇಳಿದರು.

ಅವರು ಶನಿವಾರ ಮಾಧ್ಯಮಮದೊಂದಿಗೆ ಮಾತನಾಡಿ ರಾಜ್ಯದಲ್ಲಿ ಹಿಂದುಗಳಿಗೆ ಅನ್ಯಾಯವಾಗುತ್ತಿದೆ. ಹಿಂದುಗಳ ಮೇಲೆ ಪದೆಪದೆ ಮಾರಣಾಂತಿಕ ದಾಳಿ ನಡೆಯುತ್ತಿದೆ. ಹೊನ್ನಾವರದಲ್ಲಿ ಪರೇಶ ಮೆಸ್ತ ಅವರ ಮೇಲೆ ದಾಳಿ ಹಾಗೂ ಶಾಲಾ ವಿದ್ಯಾರ್ಥಿನಿ ಮೇಲಾದ ಮಾರಣಾಂತಿಕ ದಾಳಿ ಮನುಷ್ಯ ಸಮಾಜವೆ ಖಂಡಿಸುವಂತದ್ದು. ಇದರ ಹಿಂದೆ ರಾಜಕೀಯ ದುರುದ್ದೇಶ ಇಲ್ಲದಿದ್ದಲ್ಲಿ ಸೂಕ್ತ ತನಿಖೆ ನಡೆಸಿ ನೊಂದವರಿಗೆ ನ್ಯಾಯ ಒದಗಿಸಬೇಕು. ಪರೇಶ ಮೆಸ್ತ ಕುಟುಂಬಕ್ಕೆ ರಾಜ್ಯ ಸರ್ಕಾರ ೨೫ ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಮುಸ್ಲಿಂ ತುಷ್ಟಿಕರಣದಲ್ಲಿ ತೊಡಗಿದೆ. ಮುಸ್ಲಿಂ ತುಷ್ಟಿಕರಣ ಬಿಟ್ಟಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಲಸಲು ಸಾಧ್ಯ. ನಾವೆಲ್ಲರೂ ನಮ್ಮ ನೆಚ್ಚಿನ ಕೇಂದ್ರ ಸಚಿವರಾದ ಅನಂತಕುಮಾರ ಹೆಗಡೆಯವರ ನೇತ್ರತ್ವದಲ್ಲಿ ಜಿಲ್ಲೆಯಾದ್ಯಂತ ಹೋರಾಟ ನಡೆಸಲಿದ್ದೆವೆ ಎಂದರು.