Home Important ಇನ್ಮುಂದೆ ಕರ್ನಾಟಕದ ಈ ಪ್ರಸಿದ್ಧ ಮಠದಲ್ಲಿ ಅನ್ ಲೈನ್ ಪೂಜೆ ಲಭ್ಯ..!!

ಇನ್ಮುಂದೆ ಕರ್ನಾಟಕದ ಈ ಪ್ರಸಿದ್ಧ ಮಠದಲ್ಲಿ ಅನ್ ಲೈನ್ ಪೂಜೆ ಲಭ್ಯ..!!

SHARE

ಬೆಂಗಳೂರು : ಎಲ್ಲಾ ಕ್ಷೇತ್ರದಲ್ಲೂ ಡಿಜಿಟಲ್ ವ್ಯವಸ್ಥೆ ಜಾರಿಯಾಗಿದೆ. ದೇಶದ ನಾನಾ ದೇವಸ್ಥಾನಗಳಲ್ಲಿ ಈಗಾಗಲೇ ಅನ್ ಲೈನ್ ಮೂಲಕ ಪೂಜೆ-ಪ್ರಸಾದ ವಿತರಣೆಯ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಈ ಪ್ರಸಿದ್ಧ ವೈಷ್ಣವ ಮಠವು ಭಕ್ತರಿಗೆ ಟಿಜಿಟಲ್ ಪೂಜೆ ನೀಡಲು ಮುಂದಾಗಿದೆ.

ಹೌದು, ಉಡುಪಿಯ ಶ್ರೀ ಕೃಷ್ಣಮಠದಲ್ಲಿ ಇನ್ಮುಂದೆ ಭಕ್ತರಿಗೆ ಅನ್ ಲೈನ್ ನಲ್ಲಿ ಪೂಜೆ ಮಾಡಿಸುವ ವ್ಯವಸ್ಥೆ ಜಾರಿಯಾಗುತ್ತಿದೆ. ದಿನನಿತ್ಯದ ಬಿಡುವಿಲ್ಲದ ಜಂಟಾಟದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಲು ಸಾಧ್ಯವಾಗದಿರುವ ಜನತೆಗೆ ಈ ವ್ಯವಸ್ಥೆ ವರವಾಗಿದೆ. ಐಟಿ ಉದ್ಯೋಗಿಗಳು, ವಿದೇಶದಲ್ಲಿ ವಾಸವಿರುವವರು ಸೇರಿದಂತೆ ನಿಗದಿತ ಸಮಯದಲ್ಲಿ ದೇವರಿಗೆ ಪೂಜೆ ಸಲ್ಲಿಸಲು ಸಾಧ್ಯವಿಲ್ಲದಿರುವವರು ಈ ಸೌಲಭ್ಯಗಳನ್ನು ಪಡೆಯಬಹುದು. ಮಾತ್ರವಲ್ಲ ಏಜೆನ್ಸಿಗಳ ಮೂಲಕ ಪೂಜೆ ಮಾಡಿಸಿದ ಭಕ್ತರಿಗೆ ಮಂತ್ರಾಕ್ಷತೆ ಜೊತೆಗೆ ಪ್ರಸಾದ ತಲುಪಿಸುವ ವ್ಯವಸ್ಥೆಯನ್ನು ಕೃಷ್ಣ ಮಠಮಾಡಿದೆ.

ಆದರೆ, ಈ ವ್ಯವಸ್ಥೆ ಜಾರಿಯಾಗುಲು ಇನ್ನು ಸ್ಪಲ್ಪ ದಿನ ಕಾಯಬೇಕಾಗಿದೆ. ಮುಂದಿನ ಪರ್ಯಾಯದ ನಂತರ ಈ ವ್ಯವಸ್ಥೆ ಜಾರಿಯಾಗುವ ಎಂದು ಶ್ರೀ ಮಠದ ಅಡಳಿತ ಮಂಡಳಿಯ ಮುಖ್ಯಸ್ಥರು ತಿಳಿಸಿದ್ದಾರೆ.