Home Important ಯಡಿಯೂರಪ್ಪ ಬೊಗಳೆ ದಾಸ, ಸಿಎಂ ಸಿದ್ದರಾಮಯ್ಯ.

ಯಡಿಯೂರಪ್ಪ ಬೊಗಳೆ ದಾಸ, ಸಿಎಂ ಸಿದ್ದರಾಮಯ್ಯ.

SHARE

ಕಲಬುರ್ಗಿ : ಯೋಗೀಶ್ ಗೌಡ ಪತ್ನಿ ಮಲ್ಲಮ್ಮ ಕಾಂಗ್ರೆಸ್ ಪಕ್ಷ ಸೇರುವ ವಿಚಾರಕ್ಕೆ ನಗರದಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಎಂದು ನಾವು ಹೇಳಿಲ್ಲ, ಕಾಂಗ್ರೆಸ್ ಪಕ್ಷ ಸೇರುವುದಾಗಿ ಅವರೇ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಬಿಜೆಪಿಯವರು ಕಿರುಕುಳ ನೀಡಿದ್ದರಿಂದಾಗಿ ಸುಳ್ಳು ಹೇಳಿಕೆ ನೀಡಿದ್ದರು. ಈಗ ಅವರಿಗೆ ಯಾರು ಏನೆಂದು ಮನವರಿಕೆಯಾಗಿದ್ದು ಕಾಂಗ್ರೆಸ್ ಪಕ್ಷಕ್ಕೆ ಸೇರುವುದಾಗಿ ತಿಳಿಸಿದ್ದಾರೆ ಎಂದರು.

ಇದೇ ವೇಳೆ ಬಿಎಸ್.ಯಡಿಯೂರಪ್ಪ ಅವರ ತೀಕ್ಷಣ ಮಾತಿಗೆ ಪ್ರತಿಕ್ರಿಸಿರುವ ಸಿಎಂ, ಅವರಿಗೆ ನಾಲಾಯಕ್, ಅಯೋಗ್ಯ ಪದಗಳು ಬಿಟ್ಟರೆ ಬೇರೆ ಗೊತ್ತಿಲ್ಲ. ಹೀಗಾಗಿಯೇ ಹೋದಲ್ಲೆಲ್ಲ ಅದೇ ಪದಗಳನ್ನು ಬಳಸುತ್ತಿದ್ದಾರೆ. ಬೊಗಳೆ ದಾಸಯ್ಯ ಎಂಬಂತಹ ಮಾತುಗಳನ್ನಾಡಿದ್ದಾರೆ

ನಾವು ಬೊಗಳೆ ದಾಸರಲ್ಲ ಯಾರು ಬೊಗಳೆ ದಾಸರು ಎಂಬುದನ್ನು ತಿಳಿದುಕೊಳ್ಳಲು ಬಹಿರಂಗ ಚರ್ಚೆಗೆ ಬರಲಿ ನಾವು ಬಹಿರಂಗ ಚರ್ಚೆಗೆ ಸಿದ್ಧ ಎಂದು ಸವಾಲು ಹಾಕಿದ್ದಾರೆ.