Home Local ಯುನಿವರ್ಸಿಟಿ ಬ್ಲೂ ಆಗಿ ಅಂಜುಮನ್ ಕಾಲೇಜಿನ ವಿದ್ಯಾರ್ಥಿಗಳು.

ಯುನಿವರ್ಸಿಟಿ ಬ್ಲೂ ಆಗಿ ಅಂಜುಮನ್ ಕಾಲೇಜಿನ ವಿದ್ಯಾರ್ಥಿಗಳು.

SHARE

ಭಟ್ಕಳ: ಯುನಿವರ್ಸಿಟಿ ಬ್ಲೂ ಆಗಿ ಅಂಜುಮನ್ ಬಿಬಿಎ ಮತ್ತು ಬಿಸಿಎ ಕಾಲೇಜಿನ ವಿದ್ಯಾರ್ಥಿಗಳಾದ ಮುಹಮ್ಮದ್ ಅಖಿಯಾರ್ ಮತ್ತು ಮುಹಮ್ಮದ್ ಅಲ್ಕಂ ಇವರುಗಳು ಆಯ್ಕೆಯಾಗಿದ್ದಾರೆ.

ಇವರು ಅಂಜುಮನ್ ಇನ್ಸ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮತ್ತು ಕಂಪ್ಯೂಟರ ಅಪ್ಲಿಕೇಶನ್ ( ಬಿಬಿಎ ಮತ್ತು ಬಿಸಿಎ) ಕಾಲೇಜ್‍ನ ವಿದ್ಯಾರ್ಥಿಗಳಾಗಿದ್ದು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇದರ ಪುಟ್ಬಾಲ್ ತಂಡಕ್ಕೆ ಆಯ್ಕೆಯಾಗುವುದರ ಮೂಲಕ ಯುನಿವರ್ಸಿಟಿ ಬ್ಲೂ ಆಗಿ ಹೊರಹೊಮ್ಮಿದ್ದಾರೆ.
ಇವರು ಡಿ. 21 ರಿಂದ 29 ರವರೆಗೆ ಕೇರಳದ ಕ್ಯಾಲಿಕಟ್‍ನಲ್ಲಿ ಜರಗುವ ಅಂತರ್ ವಿಶ್ವವಿದ್ಯಾಲಯ ಪುಟ್ಬಾಲ್ ಪಂದ್ಯಾಟದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದು ಕರ್ನಾಟಕದ ಪರವಾಗಿ ಆಡಲಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಜುಕಾಕೋ ಅಬ್ದುಲ್ ರಹೀಮ್, ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಶ್ಹಾಖ್ ಶಾಬಂದ್ರಿ , ಕಾಲೇಜು ಬೋರ್ಡ ಕಾರ್ಯದರ್ಶಿ ಆಫ್ತಾಬ್ ಖಮರಿ, ಪ್ರಾಂಶುಪಾಲ ಮುಹಮ್ಮದ್ ಮೋಹಸಿನ್ ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.