Home Local ಅಪಘಾತದಲ್ಲಿ ಮಹಿಳೆ ಸಾವು.

ಅಪಘಾತದಲ್ಲಿ ಮಹಿಳೆ ಸಾವು.

SHARE

ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಮಹಿಳೆ ಸಾವು

ಶಿರಸಿ : ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಶಿರಸಿಯಲ್ಲಿ ನಡೆದಿದೆ.

ತಾಲೂಕಿನ ಇಸಳೂರು ಗ್ರಾಮದ ಬಳಿ ಈ ದುರ್ಘಟನೆ ನಡೆದಿದ್ದು
ಗಾಣಿಗಕೊಪ್ಪ ನಿವಾಸಿ ಶಿಲ್ಪಾ ಹೆಗಡೆ (೩೫) ಮೃತ ಮಹಿಳೆ ಎಂದು ಗುರುತಿಸಲಾಗಿದೆ.

ಕಾರಿನಲ್ಲಿ ಪತಿ, ಮಕ್ಕಳೊಂದಿಗೆ ಹರಿಹರಕ್ಕೆ ತೆರಳುವಾಗ ಈ ಅಪಘಾತ ನಡೆದಿದ್ದು ಪತಿ ಹಾಗು ಮಗುವಿಗೆ ತೀವ್ರ ಗಾಯವಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.