Home Local ಕಾರವಾರದಲ್ಲಿ ಪತ್ತೆಯಾಯ್ತು ಕಳ್ಳ ಕಟ್ಟಿಗೆ ಸಾಗಣೆ ಜಾಲ.

ಕಾರವಾರದಲ್ಲಿ ಪತ್ತೆಯಾಯ್ತು ಕಳ್ಳ ಕಟ್ಟಿಗೆ ಸಾಗಣೆ ಜಾಲ.

SHARE

ಕಾರವಾರ : ಉರುವಲು ಕಟ್ಟಿಗೆ ನೆಪದಲ್ಲಿ ಸಾಗವಾನಿ ಚಿರಾವ ತುಂಡನ್ನು ಕಳ್ಳ ಸಾಗಾಣೆ ಮಾಡುತ್ತಿದ್ದವನ ಮೇಲೆ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ಮಾಡಿದ್ದಾರೆ.

ವಿಠೋಬಾ ದೇಸಾಯಿ ಎಂಬುವನು, ಜೋಯಿಡಾ ತಾಲೂಕಿನ ನಗರಿ ಗ್ರಾಮದಿಂದ ಟ್ರ್ಯಾಕ್ಟರ್ ಮೂಲಕ ಸಾಗವಾನಿ ಚಿರಾವ ತುಂಡನ್ನು ಕಳ್ಳ ಸಾಗಣೆ ಮಾಡುತ್ತಿದ್ದ. ಇದರ ಮಾಹಿತಿ ಕಲೆ ಹಾಕಿದ ಅರಣ್ಯಾಧಿಕಾರಿಗಳು ದಾಳಿ ಮಾಡಿ 40 ಸಾವಿರ ರೂ ಮೌಲ್ಯದ ಸಾಗವಾನಿ ಚಿರಾವ ತುಂಡುಗಳನ್ನು ವಶಪಡಿಸಿಕೊಂಡು, ಕೃತ್ಯಕ್ಕೆ ಬಳಸಿದ್ದ ಟ್ರ್ಯಾಕ್ಟರ್ ನ್ನು ವಶಪಡಿಸಿಕೊಂಡಿದ್ದಾರೆ.

ಆರ್.ಎಫ್.ಓ ಅಧಿಕಾರಿ ಮಹೀಮ ಜನ್ನು ಹಾಗೂ ಎ.ಆರ್.ಎಫ್.ಓ, ಸಂತೋಷ ಗಾವಸ್, ಮತ್ತು ರಕ್ಷಕರು ಹಾಗೂ ಸಿಬ್ಬಂದಿಗಳು ದಾಳಿಯಲ್ಲಿ ಪಾಲ್ಗೋಂಡಿದ್ದರು.