Home Photo news ಶ್ರೀ ದೇವೇಂದ್ರ ನಾರಾಯಣ ಶೇರುಗಾರ ಅವರನ್ನು ಅಭಿನಂದಿಸಿದ ನಾಗರಾಜ ನಾಯಕ ತೊರ್ಕೆ

ಶ್ರೀ ದೇವೇಂದ್ರ ನಾರಾಯಣ ಶೇರುಗಾರ ಅವರನ್ನು ಅಭಿನಂದಿಸಿದ ನಾಗರಾಜ ನಾಯಕ ತೊರ್ಕೆ

SHARE

ಕುಮಟಾ: ತಾಲೂಕಿನ ದೇವಗಿರಿ ಗ್ರಾಮ ಪಂಚಾಯತದ ಸದಸ್ಯರಾಗಿದ್ದ ಕಾಂಗ್ರೆಸ್ ಅಭ್ಯರ್ಥಿಯ ನಿಧನದಿಂದ ತೆರವಾದ ಜಾಗಕ್ಕೆ ಹೊಳೆಗದ್ದೆ ಭಾಗದ ವ್ಯಾಪ್ತಿಯಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾದ ಶ್ರೀ ದೇವೇಂದ್ರ ನಾರಾಯಣ ಶೇರುಗಾರ ಇವರು 138 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರು. ಅವರನ್ನು ಇಂದು ಬಿಜೆಪಿ ಮುಖಂಡರು ಮತ್ತು ಬೆಳಕು ಸಂಸ್ಥೆಯ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಅಭಿನಂದಿಸಿದರು. ಗೆಲುವಿನ ಕುರಿತಾಗಿ ಸಂತಸ ವ್ಯಕ್ತಪಡಿಸಿದ ಅವರು ಆತ್ಮೀಯವಾಗಿ ಅವರನ್ನು ಅಭಿನಂದಿಸಿದರು.