Home Local ಬಸ್ ಚಾಲಕನ ಮೇಲೆ ಹಲ್ಲೆ.

ಬಸ್ ಚಾಲಕನ ಮೇಲೆ ಹಲ್ಲೆ.

SHARE

ಅಂಕೋಲಾ ಬಸ್ ನಿಲ್ದಾಣದಲ್ಲಿ ಬಸ್ ಚಾಲಕನ ಮೇಲೆ ಹಲ್ಲೆ
ಅಂಕೋಲಾ : ಸಾರಿಗೆ ಇಲಾಖೆಯ ಕರ್ತವ್ಯದಲ್ಲಿದ್ದ ಚಾಲಕನ ಮೇಲೆ ಅಮಾನುಷವಾಗಿ ಸಾರ್ವಜನಿಕನೋರ್ವ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಸಾರಿಗೆ ಸಿಬ್ಬಂದಿಗಳು ಬಸ್ ನಿಲ್ದಾಣದಲ್ಲಿ ಕೆಲ ಕಾಲ ಬಸ್ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟಿಸಿದ ಘಟನೆ ಅಂಕೋಲಾ ಬಸ್ ನಿಲ್ದಾಣದ ಆವಾರದಲ್ಲಿ ಮಂಗಳವಾರ ಮದ್ಯಾಹ್ನ ನಡೆದಿದೆ.
ಅಂಕೋಲಾ ಘಟಕದ ಬಸವರಾಜ ಕಳಕಪ್ಪ ಕರಿಯಣ್ಣನವರ ಎಂಬ ಚಾಲಕನ ಮೇಲೆ ಹಲ್ಲೆ ನಡೆದಿದೆ. ಹಲ್ಲೆ ನಡೆಸಿದ ವ್ಯಕ್ತಿ ಇಲ್ಲಿಯ ಕೇಣಿ ಗ್ರಾಮದ ನಿವಾಸಿ ಸಚ್ಚಿನ ನಾಯ್ಕನ ವಿರುದ್ಧ ಸಾರಿಗೆ ಇಲಾಖೆ ಸಿಬ್ಬಂದಿಗಳು ಆಕ್ರೋಶ ವ್ಯಕ್ತಪಡಿಸಿದರು.
ಅಂಕೋಲಾ ಬಸ್ ನಿಲ್ದಾಣದಿಂದ ಕಾರವಾರಕ್ಕೆ ತೆರಳುತ್ತಿರುವ ಬಸ್‍ನ ಎದುರಿಗೆ ಏಕಾಏಕಿ ಅಡ್ಡಬಂದ ಸಚ್ಚಿನ ನಾಯ್ಕನನ್ನು ಬಸ್ ಚಾಲಕ ದಾರಿ ಬಿಟ್ಟು ಕೊಡುವಂತೆ ಹೇಳಿದಾಗ ಸಚ್ಚಿನ ನಾಯ್ಕ ಬಸ್ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ಬಯ್ದಿದಲ್ಲದೆ ಚಾಲಕನನ್ನು ಬಸ್‍ನಿಂದ ಕೆಳಗಿಳಿಸಿ ಹಿಗ್ಗಾಮುಗ್ಗಾ ತಳಿಸಿದ್ದಾನೆ. ಸಾರ್ವಜನಿಕರು ಮತ್ತು ಸಾರಿಗೆ ಸಂಸ್ಥೆಯವರು ವಿನಂತಿಸಿಕೊಂಡರು ಬಿಡದೆ ಇಬ್ಬರಲ್ಲು ವಾಗ್ವಾದ ನಡೆದಿದೆ.

ಇದೊಂದೆ ವಾರದಲ್ಲಿ ಸಾರಿಗೆ ಸಿಬ್ಬಂದಿಗಳ ಮೇಲೆ ಮೂರು ಭಾರಿ ಹಲ್ಲೆ ನಡೆಸಿದ ಪ್ರಕರಣಗಳು ನಡೆದಿದೆ. ಆದರು ನಾವು ಸಾರ್ವಜನಿಕರಿಗೆ ತೊಂದರೆ ಆಗಬಾರದೆಂಬ ದೃಷ್ಠಿಯಲ್ಲಿ ಬಸ್‍ಗಳನ್ನು ಚಲಾಯಿಸುತ್ತಿದ್ದೇವೆ ಎನ್ನುತ್ತಾರೆ ನೊಂದ ಚಾಲಕರೋರ್ವರು.
ಅಂಕೋಲಾದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹೊರತುಪಡಿಸಿ ಬೇಕಾಬಿಟ್ಟಿ ಅಲೆದಾಡುತ್ತಿರುವ ಬೈಕ್ ಸವಾರರ ತಿರುಗಾಟಕ್ಕೆ ಪೊಲೀಸ ಇಲಾಖೆ ಕಡಿವಾಣ ಹಾಕಬೇಕಿದೆ. ಬಸ್ ನಿಲ್ದಾಣದಲ್ಲಿ ಪುಂಡಪೋಕರಿಗಳ ಕಾಟ ಹೆಚ್ಚಾಗಿದೆ. ಮರ್ಯಾದಸ್ತ ಸಾರ್ವಜನಿಕರಿಗೆ ಇಂತವರ ಅಲೆದಾಟದಿಂದ ನಿಲ್ದಾಣದಲ್ಲಿ ನಿಲ್ಲುವುದು ಕಷ್ಟ ಎನ್ನುತ್ತಾರೆ ಹಿರಿಯ ಪ್ರಯಾಣಿಕರೊರ್ವರು.
ಪೊಲೀಸ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಇಂತಹ ಪುಂಡಪೋಕರಿಗಳ ಉಪಟಳಕ್ಕೆ ಕಡಿವಾಣ ಹಾಕಬೇಕಿದೆ.