Home Local ಗೋಕರ್ಣ ಗೌರವಕ್ಕೆ ಭಾಜನರಾದ ಪ ಪೂ ಮಾತಾ ಯೋಗಾನಂದಮಯಿ.

ಗೋಕರ್ಣ ಗೌರವಕ್ಕೆ ಭಾಜನರಾದ ಪ ಪೂ ಮಾತಾ ಯೋಗಾನಂದಮಯಿ.

SHARE

ಗೋಕರ್ಣ: ಪ ಪೂ ಮಾತಾ ಯೋಗಾನಂದಮಯಿ , ಸಾಧನಾಶ್ರಮ, ದಾವಣಗೆರೆ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .

ಶ್ರೀಮತಿ ದೇವಕಿ ಚಂದ್ರಶೇಖರ ಭಟ್ ಇವರು ದೇವಾಲಯದ ಪರವಾಗಿ ಪೂಜ್ಯರಿಗೆ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು . ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಹಾಗೂ ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ವೇ ಮಹಾಬಲೇಶ್ವರ ಭಟ್ ಮಾರಿಗೋಳಿ ಇವರು ಪೂಜಾ ಕೈಂಕರ್ಯ ನೆರವೇರಿಸಿದರು .