Home Local ಪ ಪೂ ಮಾತಾ ವಂದನಾಮಯಿ ಅವರಿಗೆ ಗೋಕರ್ಣ ಗೌರವ.

ಪ ಪೂ ಮಾತಾ ವಂದನಾಮಯಿ ಅವರಿಗೆ ಗೋಕರ್ಣ ಗೌರವ.

SHARE

ಗೋಕರ್ಣ: ಪ ಪೂ ಮಾತಾ ವಂದನಾಮಯಿ , ಶ್ರೀ ಭವತಾರಿಣಿ ಆಶ್ರಮ, ಬೆಂಗಳೂರು ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .

ಶ್ರೀಮತಿ ಸೀಮಾ ನಾಗರಾಜ ಹಿತ್ಲಮಕ್ಕಿ ಇವರು ದೇವಾಲಯದ ಪರವಾಗಿ ಪೂಜ್ಯರಿಗೆ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು . ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ, ಉದ್ಯಮಿ ಶ್ರೀ ನಾಗರಾಜ ಹಿತ್ಲಮಕ್ಕಿ , ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಹಾಗೂ ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ವೇ ಮಹಾಬಲೇಶ್ವರ ಭಟ್ ಮಾರಿಗೋಳಿ ಇವರು ಪೂಜಾ ಕೈಂಕರ್ಯ ನೆರವೇರಿಸಿದರು .