Home Important ” ವಲಯೋತ್ಸವ ” ಹಾಗೂ ವಾರ್ಷಿಕ ಮಹಾಸಭೆ ಸಂಪನ್ನ.

” ವಲಯೋತ್ಸವ ” ಹಾಗೂ ವಾರ್ಷಿಕ ಮಹಾಸಭೆ ಸಂಪನ್ನ.

SHARE

ಮುಳ್ಳೇರಿಯ ಮಂಡಲಾಂತರ್ಗತ ಎಣ್ಮಕಜೆ ಹವ್ಯಕ ವಲಯ
ಅಮೃತಧಾರಾ ಗೋಶಾಲೆ, ಗೋಲೋಕ, ಬಜಕೂಡ್ಲು.
ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಪೂರ್ಣಾನುಗ್ರಹದೊಂದಿಗೆ ಮುಳ್ಳೇರಿಯಾ ಮಂಡಲಾದೇಶ ಪ್ರಕಾರ ಮುಳ್ಳೇರಿಯ ಮಂಡಲಾಂತರ್ಗತ ಎಣ್ಮಕಜೆ ಹವ್ಯಕ ವಲಯದ ವಲಯೋತ್ಸವ ಹಾಗು ವಾರ್ಷಿಕ ಮಹಾಸಭೆಯು ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಹಾಗು ವಿವಿಧ ಸ್ಪರ್ಧೆಗಳೊಂದಿಗೆ ಸಂಪನ್ನವಾಯಿತು.

ಧ್ವಜಾರೋಹಣ, ಶಂಖ ನಾದ, ಗುರುವಂದನೆ, ಗೋವಂದನೆಯೊಂದಿಗೆ ಮಾಹಾಮಂಡಲ ಧರ್ಮ ಕರ್ಮ ಸಹಕಾರ್ಯದರ್ಶಿ, ವಲಯ ವೈದಿಕ ಪ್ರಧಾನ ವೇ| ಮೂ| ಕೇಶವ ಪ್ರಸಾದ ಕೂಟೇಲು ಇವರ ನೇತೃತ್ವದಲ್ಲಿ ಗಣಪತಿ ಹವನ, ಗೋಪೂಜೆ, ರುದ್ರಹವನ, ಐಕಮತ್ಯ ಜಪ, ಕಲಶ ಪ್ರತಿಷ್ಠೆ, ಶ್ರೀ ಗೋಪಾಲಕೃಷ್ಣ ಕಲ್ಪೋಕ್ತ ಪೂಜೆಯೊಂದಿಗೆ ಪ್ರಾರಂಭ.
ಮಂಡಲ ವೈದಿಕ ಪ್ರಮುಖ, ಎಣ್ಮಕಜೆ ವಲಯ ಉಸ್ತುವಾರಿ ಗಣೇಶ ಭಟ್ಟ ಮಾಡಾವು ಹಾಗು ವೇ|ಮೂ| ವೆಂಕಟೇಶ್ವರ ಭಟ್ಟ ಪಟ್ಟಾಜೆ ಇವರು ಪೂಜೆಗಳನ್ನು ಹಾಗು ವೇ| ಮೂ| ಕೇಶವ ಪ್ರಸಾದ ಕೂಟೇಲು ಇವರು ರುದ್ರಹವನವನ್ನು ನೆರವೇರಿಸಿಕೊಟ್ಟರು.
ರುದ್ರಾದ್ಯಾಯಿಗಳಿಂದ ರುದ್ರಪಾರಾಯಣ, ಹಾಗು ಮಾತೃವಿಭಾಗದ ವತಿಯಿಂದ ಕುಂಕುಮಾರ್ಚನೆ ಹಾಗು ಭಜನೆ ಜರಗಿತು.
ರುದ್ರಹವನ ಸಂಕಲ್ಪ ಹಾಗು ಗೋ ಪೂಜೆಯನ್ನು ನಡೆಸಲು ಅಪೇಕ್ಷಿತರಿಗೆ ವ್ಯವಸ್ಥೆ ಕಲ್ಪಿಸಲಾಯಿತು.
ಬಳಿಕ ಹೂ ಮಾಲೆ ಕಟ್ಟುವುದು, ಮೊಸರು ಕಡೆಯುವುದು, ಅಡಿಕೆ ಸುಲಿಯಿಯುವುದು, ಮಡಕೆ ಒಡೆಯುವುದು, ಶ್ಲೋಕ ಪಠಣ, ಮೊದಲಾದ ವಿಧದ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು
ಅಪರಾಹ್ನ ವಾರ್ಷಿಕ ಮಹಾಸಭೆಯು ಶಂಖ ನಾದ, ಗುರುವಂದನೆ, ಗೋವಂದನೆಯೊಂದಿಗೆ ಮುಳ್ಳೇರಿಯಾ ಮಂಡಲ ಕಾರ್ಯದರ್ಶಿ, ಎಣ್ಮಕಜೆ ವಲಯ ದಿದ್ಗರ್ಶಕರೂ ಆದ ಬಾಲಸುಬ್ರಹ್ಮಣ್ಯ ಭಟ್ಟ ಸರ್ಪಮಲೆ ಇವರ ಅಧ್ಯಕ್ಷತೆಯಲ್ಲಿ ಜರಗಿತು. ವಲಯ ಅಧ್ಯಕ್ಷ ಶಿವಪ್ರಸಾದ ವರ್ಮುಡಿ ಇವರಿಂದ ಸ್ವಾಗತ ಹಾಗು ಪ್ರಸ್ತಾವನೆ ನಡೆಯಿತು.

ಉಪಸ್ಥಿತಿ :- ಮಾಹಾಮಂಡಲ ಧರ್ಮ ಕರ್ಮ ಸಹಕಾರ್ಯದರ್ಶಿ, ವಲಯ ವೈದಿಕ ಪ್ರಧಾನ ವೇ| ಮೂ| ಕೇಶವ ಪ್ರಸಾದ ಕೂಟೇಲು, ಮುಳ್ಳೇರಿಯಾ ಮಂಡಲ ವೈದಿಕ ಪ್ರಮುಖ ಗಣೇಶ ಭಟ್ಟ ಮಾಡಾವು, ಮುಳ್ಳೇರಿಯಾ ಮಂಡಲ ಶಿಷ್ಯಮಾದ್ಯಮ ಪ್ರಮುಖ ಮಹೇಶ ಸರಳಿ, ವಿಧ್ಯಾರ್ಥಿ ವಾಹಿನಿ ಪ್ರಮುಖ ಕೇಶವಪ್ರಸಾದ ಎಡಕ್ಕಾನ, ಮಾತೃ ಪ್ರದಾನೆ ಕುಸುಮ ಪೆರ್ಮುಖ, ಭಿಂದು ಸಿಂದು ಪ್ರದಾನೆ ದೇವಕಿ ಪನ್ನೆ.
ವೇ| ಮೂ| ವೆಂಕಟೇಶ್ವರ ಭಟ್ಟ ಪಟ್ಟಜೆ ಇವರು ಮುಖ್ಯ ಭಾಷಣದಲ್ಲಿ ಈ ಗುರುಗಳನ್ನು ಪೀಠಕ್ಕೆ ಆಯ್ಕೆ ಮಾಡುವ ಬಹಳ ಹಿಂದೆ ತಾವು ಮಠದಲ್ಲಿ ಇರುವ ಸಂಧರ್ಭದಲ್ಲಿ ಹಿರಿಯ ಗುರುಗಳು ಹಾಗು ಹಿರಿಯ ವಿದ್ವಾಂಸರಾದ ಶಿರಂಕಲ್ಲು ಈಶ್ವರ ಜೋಯಿಸರ ನಡುವೆ ನಡೆದ ಸಂವಾದದಲ್ಲಿ ಮುಂದಿನ ಪಾಠಾಧಿಪತಿಗಳು ಸಮಾಜವನ್ನು ಧರ್ಮದೆಡೆಗೆ ಜಾಗೃತ ಗೊಳಿಸುತ್ತಾ ಸಮಾಜವನ್ನು ಸಂಘಟಿಸುತ್ತಾ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವಂತಹ ಪೀಠಾಧಿಪತಿಯಾಗಿರುತ್ತರೆಂದು, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಕೈಗೊಳ್ಳುತ್ತಿರುವ ಧರ್ಮ ಕಾರ್ಯ ಸಮಾಜಮುಖಿ ಕಾರ್ಯಗಳು ಹಿರಿಯ ಗುರುಗಳು ಅಂದು ನುಡಿದಂತೇ ಜರಗುತ್ತಿರುವುದನ್ನು ಉಲ್ಲೇಖಿಸುತ್ತಾ, ತಂದೆ ತಾಯಂದಿರು ಸ್ವತಃ ತಾವು ನಮ್ಮ ಸಂಸ್ಕಾರಗಳನ್ನು ಅನುಸರಿಸುತ್ತಾ ಗಂಡುಮಕ್ಕಳನ್ನು ಸಂಧ್ಯಾವಂದನೆ, ಗಾಯತ್ರೀ ಜಪ ಹಾಗು ಹೆಣ್ಣು ಮಕ್ಕಳಿಗೆ ಕನ್ಯನ್ಯಾಸಂಸ್ಕಾರದೊಂದಿಗೆ ಬೆಳೆಸಿ ಸಂಸ್ಕಾರಯುತರನ್ನಾಗಿಸಲು ತಿಳಿಸಿದರು. ಗೋವು ಮೂವತ್ತಮೂರು ಕೋಟಿ ದೇವತೆಗಳ ಆವಾಸಸ್ಥಾನವಾಗಿದ್ದು, ಗೋವಿನ ಆರಾಧನೆ ಸಂಮ್ರಕ್ಷಣೆ ಪೋಷಣೆಯಲ್ಲಿ ಮೂವತ್ತಮೂರು ಕೋಟಿ ದೇವತೆಗಳೂ ಸಂತೃಪ್ತಿಗೊಳ್ಲುವ ಕಾರಣದಿಂದಲೆ ಶ್ರೀ ಗುರುಗಳು ಗೋವಿನ ಸಂಮ್ರಕ್ಷಣೆಯ ಮಹತ್ಕಾರ್ಯ ಕೈಗೊಳ್ಳುತ್ತಿರುವುದು, ಎಲ್ಲರೂ ಸ್ವತಃ ಗೋವುಗಳನ್ನು ಸಾಕಬೇಕು, ಕನಿಷ್ಠ ಪಕ್ಷ ಒಂದು ಕರುವನ್ನಾದು ಪೋಷಿಸಿ, ಅದೂ ಸಾದ್ಯವಾಗದ ಪರಿಸ್ಥಿತಿಯಲ್ಲಿ ಇಂತಹ ಗೋಶಾಲೆಗಳಲ್ಲಿ ಸಹಾಯ ಮಾಡುವ ಮೂಲಕ ಗೋ ಸಂರಕ್ಷಣೆಗೆ ಕೈ ಜೋಡಿಸಲು ಕರೆಯಿತ್ತರು. ಹಾಗು ಇಂದು ಜರಗಿದ ರುದ್ರ ಹವನ ಅತ್ಯಂತ ಶ್ರೇಷ್ಠ ಹವನ, ದೇಶೀಗೋವಿನ ತುಪ್ಪದ ಆಹುತಿಯಿಂದ ರುದ್ರನು ಅತ್ಯಂತ ಸಂತೃಪ್ತ ಗೊಳ್ಳುವನು, ರುದ್ರಪಾರಾಯಣ ಹಾಗು ಪ್ರದೋಷ ಕಾಲ ರುದ್ರತಾಂಡವ ಕಾಲ ಆ ಸಂಧರ್ಭದಲ್ಲಿ ನಡೆಸುವ ರುದ್ರ ಪಾರಾಯಣಕ್ಕೆ ದ್ವಿಗುಣ ಫಲವಿದೆ ಎಲ್ಲರೂ ಇದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಡು ಸಾರ್ತಕತೆಯ ಸಂತೃಪ್ತ ಜೀವನ ನಡೆಸಲು ಮಾರ್ಗದರ್ಶನ ಮಾಡಿದರು.

ಜೀವನದಲ್ಲಿ ಉನ್ನತ ಸಾಧನೆಗೈದ ಎಣ್ಮಕಜೆ ವಲಯದ ಹಿರಿಯ ವೈದಿಕರಾದ ವೇ| ಮೂ| ಶುಳುವಾಲಮೂಲೆ ತಿರುಮಲೇಶ್ವರ ಭಟ್ಟ ಕೂಟೇಲು, ಹಿರಿಯ ಸಾಹಿತಿ ವಾಟೆ ಮಹಾಲಿಂಗ ಭಟ್ಟ, ಹಿರಿಯ ಗೃಹಿಣಿ ಶ್ರೀಮತಿ ಲಕ್ಷ್ಮಿ ಅಮ್ಮ ಕುಂಚಿನಡ್ಕ, ಹಿರಿಯ ಪಾಕಶಾಸ್ತ್ರಜ್ಞ ನೇರೊಳು ಪೈಸಾರಿ ಈಶ್ವರ ಭಟ್ಟ, ಹಿರಿಯ ವೈದಿಕ ಸಹಾಯಕ ಪರಮೇಶ್ವರ ಭಟ್ಟ ಪರ್ತಿಕ್ಕಾರು, ಹಿರಿಯ ಕೃಷಿಕ ಚೌರ್ಕಾಡು ನಾರಾಯಣ ಜೋಯಿಸ ಇವರನ್ನು ಸಂಧರ್ಭದಲ್ಲಿ ಗೌರವಿಸಲಾಯಿತು.

ವೇ| ಮೂ| ಶುಳುವಾಲಮೂಲೆ ತಿರುಮಲೇಶ್ವರ ಭಟ್ಟರು ಹಾಗು ವಾಟೆ ಮಹಾಲಿಂಗ ಭಟ್ಟರು ಗೌರವಿಸಲ್ಪಟ್ಟವಲ್ಲರ ಪರವಾಗಿ ಗೌರವಕ್ಕೆ ಕೃತಜ್ಞತೆ ಸಲ್ಲಿಸಿದರು.

ಮಹೇಶ ಸರಳಿ ಇವರು ಮಾತನಾಡಿ ವಲಯಕ್ಕೆ ಶುಭ ಹಾರೈಸಿದರು.

ಮಾತೃವಿಭಾಗ ವತಿಯಿಂದ ರಾಮಾಯಣ ಪಾರಾಯಣ ಸಂಧರ್ಭದಲ್ಲಿ ತಯಾರಿಸಿ ಮಾರಟ ಮಾಡಿದ ತಿಂಡಿ ತಿನಿಸುಗಳ ಹಣ ರೂ 6000/- ಗೋಶಾಲೆಗೆ ಸಮರ್ಪಿಸಿದರು.

ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಸಭಾಧ್ಯಕ್ಷರಾದ ಮುಳ್ಳೇರಿಯಾ ಮಂಡಲ ಕಾರ್ಯದರ್ಶಿ, ಎಣ್ಮಕಜೆ ವಲಯ ದಿದ್ಗರ್ಶಕರೂ ಆದ ಬಾಲಸುಬ್ರಹ್ಮಣ್ಯ ಭಟ್ಟ ಸರ್ಪಮಲೆ ಮಾತನಾಡಿ ದೀಪ ಕಣಿಕೆ ಹಾಗು ಬೆಳೆಸಮರ್ಪಣೆಯ ಮಹತ್ವ ತಿಳಿಸಿ ಇದನ್ನು ಶ್ರೀ ಗುರುಗಳನ್ನು ನೇರವಾಗಿ ಪ್ರತಿನಿಧಿಸುವ ಗುರಿಕ್ಕಾರ ಮನೆಯಲ್ಲಿ ಸಮರ್ಪಣಾ ಮನೋಭಾವದಿಂದ ಸಮರ್ಪಿಸಿ ಗುರುಕೃಪೆಗೆ ಪಾತ್ರರಾಗಲು ವಿನಂತಿಸಿದರು, ಶ್ರೀ ಮಠ ಸೂಚಿಸಿದ ಎಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಎಣ್ಮಕಜೆ ವಲಯ ವಲಯೋತ್ಸವ ನಡೆಸಿದ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ವಲಯ ಅಧ್ಯಕ್ಷರು ತಾ 24/12 ರಂದು ಬದಿಯಡ್ಕ ವಿದ್ಯಾಪೀಠದಲ್ಲಿ ಜರಗಲಿರುವ ಮಂಡಲ ಸಮಾವೇಶ ಹಾಗು ವಲಯದಲ್ಲಿ ದೀಪಕಾಣಿಕೆ ಸಮರ್ಪಣೆಯ ಸೂಚನೆ ನೀಡಿದರು.

ವಲಯ ಉಪಾಧ್ಯಕ್ಷ ಗಣೇಶ್ ಕುಮಾರ್ ಕುಂಚಿನಡ್ಕ ಧನ್ಯವಾದವಿತ್ತರು.

ವಾಸುದೇವ ನಾಮಸ್ಮರಣೆ, ರಾಮತಾರಕ ಮಂತ್ರ, ದ್ವಜ ಅವರೋಹಣ, ಶಂಖನಾದದೊಂದಿಗೆ ಮುಕ್ತಾಯವಾಯಿತು.