Home Local ಹೊನ್ನಾವರದಲ್ಲಿ ಬಸ್ ಪಲ್ಟಿ : ಹತ್ತಕ್ಕೂ ಹೆಚ್ಚು ಜನ ಗಂಭೀರ

ಹೊನ್ನಾವರದಲ್ಲಿ ಬಸ್ ಪಲ್ಟಿ : ಹತ್ತಕ್ಕೂ ಹೆಚ್ಚು ಜನ ಗಂಭೀರ

SHARE

ಹೊನ್ನಾವರ : ವಾಯುವ್ಯ ರಸ್ತೆ ಸಾರಿಗೆ ಬಸ್ ಪಲ್ಟಿ ಯಾಗಿರುವ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ರೆ ಇನ್ನು ಹತ್ತಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರ ಗಾಯಗೊಂಡಿರುವ ಘಟನೆ ತಾಲೂಕಿನ ಯಲಗುಪ್ಪಾ ಬಳಿ ನಡೆದಿದೆ.

ಕಾರವಾರದಿಂದ ಚಿಕ್ಕಮಗಳೂರು ಹೊರಟ್ಟಿದ್ದ ಬಸ್ ಏಕಾಏಕಿ ಪಲ್ಟಿಯಾಗಿದೆ.

ಈ ಬಸ್ ಕಾರವಾರ ಡಿಪೋಗೆ ಸೇರಿದ್ದಾಗಿದೆ‌. ಘಟನೆಯಲ್ಲಿ ಗಾಯಗೊಂಡಿರುವವರನ್ನು ಹೊನ್ನಾವರ ಆಸ್ಪತ್ರೆ ಸಾಗಿಸಲಾಗಿದೆ. ಅಪಘಾತದಲ್ಲಿ ತಾಯಿ ಮಗು ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆ ಗಾಗಿ ಮಣಿಪಾಲ ಆಸ್ಪತ್ರೆ ಸಾಗಿಸಲಾಗಿದೆ.

ಅಫಘಾತದಲ್ಲಿ ಎಂ ಸಂಗೀತ ಲಿಂಗಯ್ಯ (30)ಮೈಸೂರಿನ ಪೋಲೀಸ್ ಕ್ವಾಟ್ರಸ್ ನಿವಾಸಿ ಮತ್ತು ಪ್ರೀತಮ್ ಸಿದ್ದಲಿಂಗಪ್ಪ (09)ಹುಬ್ಬಳ್ಳಿ ಮಂಗಳವಾರ ಪೇಟೆ ನಿವಾಸಿ ಮೃತ ಪಟ್ಟಿರುವದಾಗಿ ತಿಳಿದು ಬಂದಿದೆ.