Home Local ಜಗಜ್ಜನನಿ ಮಠದ ಶ್ರೀಗಳಿಗೆ “ಗೋಕರ್ಣ ಗೌರವ”

ಜಗಜ್ಜನನಿ ಮಠದ ಶ್ರೀಗಳಿಗೆ “ಗೋಕರ್ಣ ಗೌರವ”

SHARE

ಗೋಕರ್ಣ : ಪ ಪೂ ಶ್ರೀ ಶ್ರೀ ಕಾಮೇಶ್ವರ ಸ್ವಾಮೀಜಿ , ಜಗಜ್ಜನನಿ ಮಠ , ಗೋಕಾಕ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .

ಉಪಾಧಿವಂತ ಮಂಡಳಿ ಸದಸ್ಯ ವೇ ವಿಶ್ವನಾಥ ಭಟ್ ಬಾಳೆಹಿತ್ಲು ಇವರು ದೇವಾಲಯದ ಪರವಾಗಿ ಪೂಜ್ಯರಿಗೆ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು . ವೇ ರಾಮಚಂದ್ರ ಜಂಭೆ ಇವರು ಪೂಜಾ ಕೈಂಕರ್ಯ ನೆರವೇರಿಸಿದರು .