Home Uttara Kannada ವಿಶೇಷ ಉಪನ್ಯಾಸ ನೀಡಿದ ಡಾ. ಪಿ.ಜೆ ಭಟ್ಟ

ವಿಶೇಷ ಉಪನ್ಯಾಸ ನೀಡಿದ ಡಾ. ಪಿ.ಜೆ ಭಟ್ಟ

ಕುಮಟಾ : ತಾಲೂಕಿನ ಗೋರೆಯಲ್ಲಿರುವ ಕೆನರಾ ಎಕ್ಸಲೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ ಇಸ್ರೋ ಸಂಸ್ಥೆಯ ನಿವೃತ್ತ ಡೆಪ್ಯೂಟಿ ಡೈರೆಕ್ಟರ್ ಪಿ.ಜೆ. ಭಟ್ ರವರು ಚಂದ್ರಯಾನ -3 ಕುರಿತಾದ ವಿಜ್ಞಾನ ಉಪನ್ಯಾಸ  ನಡೆಸಿಕೊಟ್ಟರು. 

ಚಂದ್ರಯಾನ -3 ಯಶಸ್ವಿಯಾದ ಬಗೆ, ರೋವರ್ ಮತ್ತು ಲ್ಯಾಂಡರ್ ಗಳಲ್ಲಿ ಅನುಸರಿಸಲಾದ ತಂತ್ರಜ್ಞಾನಗಳು ಹಾಗೂ ಅಳವಡಿಸಿದ್ದ ವಿಶೇಷ ಉಪಕರಣಗಳ ಬಗ್ಗೆ ಹಂತ ಹಂತವಾಗಿ ವಿದ್ಯಾರ್ಥಿಗಳಿಗೆ ಅವರು ಮಾಹಿತಿ ನೀಡಿದರು. 

ಪಿ.ಜೆ ಭಟ್ಟರವರು ಇಸ್ರೋದಲ್ಲಿ  ಸುದೀರ್ಘ 41 ವರ್ಷಗಳ ಕಾಲ ಸೇವೆ ಸಲ್ಲಿಸಿ ಅತ್ಯುನ್ನತ ಹುದ್ದೆಯಲ್ಲಿದ್ದು ನಿವೃತ್ತಿ ಹೊಂದಿದ್ದು, ಈಗಾಗಲೇ  ಗ್ರಾಮೀಣ ಭಾಗದ ಅನೇಕ ಶಾಲಾ ಕಾಲೇಜುಗಳಲ್ಲಿ ಎರಡು ನೂರಕ್ಕೂ ಹೆಚ್ಚು ಉಪನ್ಯಾಸವನ್ನು ನೀಡಿರುತ್ತಾರೆ. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ.ಜಿ. ಜಿ. ಹೆಗಡೆ ವಹಿಸಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಿ.ಎನ್. ಭಟ್ಟ, ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.