ದಾಂಡೇಲಿ : ನಗರದ ಗ್ರಾಮೀಣ ಪೊಲೀಸ್ ಠಾಣೆಯ ಸರಹದ್ದಿನ ಕರ್ಕಾ ಚೆಕ್ ಪೊಸ್ಟ್ ಬಳಿ ಬೈಕ್ ಮತ್ತು ಸರಕಾರಿ ಬಸ್ ಅಪಘಾತಕ್ಕೀಡಾಗಿ ಬೈಕ್ ಸವಾರ ಗಂಭೀರ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ದಾಖಲಿಸಿದ ಘಟನೆ ಸೋಮವಾರ ನಡೆದಿದೆ.

ದ್ವ್ವಿಚಕ್ರ ವಾಹನ (ಕೆಎ-65, ಇ 9925) ರ ಮೂಲಕ ಹಳಿಯಾಳದ ಕೇಸರೊಳ್ಳಿಯಿಂದ ದಾಂಡೇಲಿಯ ಕಾಗದ ಕಾರ್ಖಾನೆಗೆ ಕೆಲಸಕ್ಕೆಂದು ಮುಂಜಾನೆ ಬರುತ್ತಿದ್ದ ಕಾರ್ಮಿಕ ನಿವೇದಿತ್ ಒಳಪ್ಪ ಬಾಳೆಕರ ಎದುರುಗಡೆಯಿಂದ ಬರುತ್ತಿದ್ದ ದಾಂಡೇಲಿಯಿಂದ ಕೊಲ್ಲಾಪುರಕ್ಕೆ ಹೋಗುತ್ತಿದ್ದ ಸಾರಿಗೆ ಬಸ್ (ಕೆಎ25, ಎಫ್ 3310) ಕ್ಕೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದಾನೆ. ಬಲಗಾಲು ಮತ್ತು ಬಲ ಗೈ ಸಂಪೂರ್ಣ ನಜ್ಜು ಗುಜ್ಜಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ರವಾನಿಸಲಾಗಿದೆ.

RELATED ARTICLES  ಉತ್ತರ ಕನ್ನಡ ಜಿಲ್ಲಾ ಸಬ್ ಜೂನಿಯರ್ ಖೋಖೊ ತಂಡದ ಆಯ್ಕೆ

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಕೊಣ್ಣೂರು ಅವರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.