ಭಟ್ಕಳ: ಭಾರತ ರತ್ನ ಪುರಸ್ಕತ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರ್ ವಾಜಪೇಯಿಯವರ 93ನೇ ಹುಟ್ಟುಹಬ್ಬದ ಪ್ರಯುಕ್ತ ತಾಲೂಕಾ ಬಿಜೆಪಿ ಘಟಕದ ವತಿಯಿಂದ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬಿ.ಜೆ.ಪಿ. ತಾಲೂಕ ಅಧ್ಯಕ್ಷ ರಾಜೇಶ ನಾಯ್ಕ ಮಾತನಾಡಿದ್ದು ಭಾರತ ದೇಶ ಕಂಡ ಅಪ್ರತಿಮ ದೇಶಭಕ್ತ ಅಟಲ್ ಬಿಹಾರ್ ವಾಜಪೇಯಿ ಅವರ ಹುಟ್ಟುಹಬ್ಬದ ವಿಶೇಷವಾಗಿ ಹಣ್ಣು-ಹಂಪಲು ವಿತರಿಸಿದ್ದು, ಅವರು ಬಡಜನರ ಮೇಲಿಟ್ಟ ಪ್ರೀತಿಗೆ ಅವರ ದಾರಿಯಲ್ಲಿಯೇ ನಾವು ನಡೆಯುತ್ತಿದ್ದೇವೆ. ಅವರಿಗೆ ದೇವರು ಆಯುಷ್ಯ ಆರೋಗ್ಯ ನೀಡಲಿ ಎಂದು ಹಾರೈಸಿದರು.

RELATED ARTICLES  ಕೊರೋನಾ ಸಂಕಷ್ಟದಲ್ಲಿ ಬಡವರ ಸ್ಥಿತಿಯ ಅರಿವಿದೆ : ಶಾಸಕ ದಿನಕರ

ಜಿಲ್ಲಾ ಬಿ.ಜೆ.ಪಿ. ಉಪಾಧ್ಯಕ್ಷ ಗೋವಿಂದ ನಾಯ್ಕ, ಜಿಲ್ಲಾ ಬಿ. ಜೆ.ಪಿ. ಯುವಮೋರ್ಚಾ ಪ್ರದಾನ ಕಾರ್ಯದರ್ಶಿ ಸುನಿಲ್ ನಾಯ್ಕ, ಮಹಿಳಾ ಮೋರ್ಚಾ ತಾಲೂಕ ಪ್ರದಾನ ಕಾರ್ಯದರ್ಶಿ ಶಿವಾನಿ ಶಾಂತರಾಮ್, ತಾಲೂಕ ಹಿರಿಯ ಮುಖಂಡರಾದ ಕೃಷ್ಣ ನಾಯ್ಕ, ಪರಮೇಶ್ವರ ದೇವಾಡಿಗ, ಭಾಸ್ಕರ ಮೋಗೇರ, ಭಟ್ಕಳ ತಾಲೂಕ ಯುವಮೋರ್ಚಾ ಅಧ್ಯಕ್ಷ ಲಕ್ಷ್ಮಣ ನಾಯ್ಕ, ರವಿ ನಾಯ್ಕ ಜಾಲಿ, ಶ್ರೀನಿವಾಸ ನಾಯ್ಕ, ಮಹೆಂದ್ರ ನಾಯ್ಕ, ಪಿ.ಎಸ್. ಜೋಶಿ ಮುಂತಾದ ಬಿಜೆಪಿ ಘಟಕದ ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES  ನವೆಂಬರ್ 17 ರ ವರೆಗೆ ಮತ್ತೆ ಮಳೆ ಸಾಧ್ಯತೆ : ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ