ವಿ ಆರ್ ಎಲ್ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ 7 ಜನರಿಗೆ ಗಂಭೀರ ಗಾಯ

ಭಟ್ಕಳ : ವಿ ಆರ್ ಎಲ್ ಬಸ್ ಮತ್ತು ಲಾರಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ೭ ಜನರಿಗೆ ಗಂಭೀರ ಗಾಯಗೊಂಡ ಘಟನೆ ಭಟ್ಕಳದ ಬೆಳಕೆ ಬಳಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ ೬೬ ರಲ್ಲಿ ಈ ಅಪಘಾತ ನಡೆದಿದ್ದು ಬೆಳಗಾವಿಯಿಂದ ಮಂಗಳೂರುರಿಗೆ ಹೋಗುತ್ತಿದ್ದ ವಿಆರ್ ಎಲ್ ಸಂಸ್ಥೆಗೆ ಸೇರಿದ ವೋಲ್ವೋ ಬಸ್ ಎಂದು ತಿಳಿದು ಬಂದಿದೆ
ಬಸ್ ಚಾಲಕನ ಗಂಭೀರವಾಗಿ ಗಾಯಗೊಂಡಿದ್ದಾನೆ ಹಾಗೂ ಉಳಿದ ಪ್ರಯಾಣಿಕರು ಗಾಯಾಳುಗಳಾಗಿದ್ದು ಅವರನ್ನು ಭಟ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.