ಕುಮಟಾ: ತಾಲೂಕಿನ ಹಲವು ಕಡೆ ಅನೇಕ ಕಾಮಗಾರಿಗಳಿಗೆ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ಶಂಕು ಸ್ಥಾಪನೆ ನೆರವರಿಸಿದ್ರು.

ತಾಲೂಕಿನ ಹೆಗಡೆ ಗ್ರಾಮ ಪಂಚಾಯತ ವ್ಯಾಪ್ತಿಯ ಕಾಸನಗುಂಡಿಯಲ್ಲಿ ಕಾಂಕ್ರೇಟ್ ಕಾಲುಸಂಕ ನಿರ್ಮಾಣ ಮಾಡಲು ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅನುಧಾನದಡಿಯಲ್ಲಿ ಅಂದಾಜು ಮೊತ್ತ 10 ಲಕ್ಷ ಅನುಧಾನ ಸರಕಾರದಿಂದ ಬಿಡುಗಡೆಯಾಗಿದ್ದು ಈ ಕಾಮಗಾರಿಗೆ ಶಾಸಕರು ಗುದ್ದಲಿ ಪೂಜೆ ನೆರವೇರಿಸದರು.

IMG 20171226 WA0008

ಈಲ್ಲಿ ನಿರ್ಮಾಣವಾಗುವ ಸೇತುವೆಯಿಂದ ಈ ಭಾಗದ ಗ್ರಾಮಸ್ಥರಿಗೆ ಬಹಳ ಅನುಕೂಲವಾಗಲಿದೆ ಎನ್ನುವ ನಿಟ್ಟಿನಲ್ಲಿ ಸರಕಾರ ಈ ಕಾಮಗಾರಿಯನ್ನು ಮಂಜೂರಿ ಮಾಡಿದೆ., ಅಲ್ಲದೆ, ತಾಲೂಕಿನ ಹೊಲನಗದ್ದೆ ಪಂಚಾಯತ ವ್ಯಾಪ್ತಿಯಲ್ಲಿ 12 ಲಕ್ಷ ಅನುಧಾನದಲ್ಲಿ ಮಂಜೂರಾಗಿರುವ ಮಂಗೋಡ್ಲದಿಂದ ವನ್ನಳಿಗೆ ಸಂಪರ್ಕ ಕಲ್ಪಿಸುವ ಕಾಲುಸಂಕ ಮತ್ತು ಕಾಂಕ್ರೇಟ್ ರಸ್ತೆ ನಿರ್ಮಾಣ ಕಾಮಗಾರಿಯ ಗುದ್ದಲಿಪೂಜೆಯನ್ನು ಕೂಡ ನೆರವರಿಸಿದ್ರು.ಎರಡು ಗ್ರಾಮಗಳನ್ನು ಸಂಪರ್ಕಿಸುವುದಕ್ಕೆ ಈ ಸೇತುವೆ ಮುಖ್ಯವಾಗಿದೆ.

RELATED ARTICLES  ಯುನಿವರ್ಸಿಟಿ ಬ್ಲೂ ಆಗಿ ಅಂಜುಮನ್ ಕಾಲೇಜಿನ ವಿದ್ಯಾರ್ಥಿಗಳು.

ಈ ಮಾತನಾಡಿದ ಶಾಸಕರು ಕರಾವಳಿ ಭಾಗದಲ್ಲಿ ಹೊಳೆ,ನದಿಗಳು ಇರುವುದರಿಂದ ಮಳೆಗಾಲದಲ್ಲಿ ನೀರು ತುಂಬಿ ರಸ್ತೆಯಲ್ಲಿ ಪ್ರಯಾಣಿಸುವುದು ಕಷ್ಟವಾಗುತ್ತಿದೆ. ಆದರಿಂದ ಕರಾವಳಿ ಅಭಿವೃದ್ದಿ ಪ್ರಾಧಿಕಾರದಿಂದ ಹೆಚ್ಚಿನ ಅನುಧಾನವನ್ನು ನಮ್ಮ ತಾಲೂಕಿಗೆ ಮಂಜೂರು ಮಾಡಿಸಿದ್ದೇನೆ. ಜೊತೆಗೆ ತಾಲೂಕಿನ ಹಲವಡೆ ಕಾಲುಸಂಕ ನಿರ್ಮಾಣ ಮತ್ತು ಇನ್ನಿತರ ಕಾಮಗಾರಿ ಮಂಜೂರು ಮಾಡಿರುವ ಬಗ್ಗೆ ಮಾಹಿತಿ ನೀಡಿದರು.

RELATED ARTICLES  ಜಿಲ್ಲಾ ಮಟ್ಟದ 17ವರ್ಷ ವಯೋಮಿತಿಯೊಳಗಿನ ಪ್ರೌಢಶಾಲೆಗಳ ಇಲಾಖಾ ಕ್ರೀಡಾಕೂಟ ಸಂಪನ್ನ.

ಈ ವೇಳೆ ಉಪಸ್ಥಿತರಿದ್ದ ಜಿಲ್ಲಾ ಪಂಚಾಯತ ಸದಸ್ಯ ರತ್ನಾಕರ ನಾಯ್ಕ ನಮ್ಮ ಕ್ಷೇತ್ರದಲ್ಲಿ ಇತಂಹ ಸಮಸ್ಯೆಗಳು ಅನೇಕ ವರ್ಷಗಳಿಂದ ಕಾಡುತಿತ್ತು, ಆದರೆ ನಮ್ಮ ಶಾಸಕರಿಂದ ಈ ಎಲ್ಲಾ ಸಮಸ್ಯೆಗಳು ನಿವಾರಣೆ ಆಗಿದೆ. ಆದ್ದರಿಂದ ನಾನೂ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದರು.ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಲ್,ನಾಯ್ಕ,ತಾರ ಗೌಡ.ಸುರೇಖ ವಾಲೇಕರ್,ನಾಗವೇಣಿ ಮುಕ್ರಿ,ಪಿ,ಎನ್,ಹೆಗಡೆ,ರಾಘವೇಂದ್ರ ಪಟಗಾರ ಮುಂತಾದವರು ಉಪಸ್ಥಿತರಿದ್ದರು.