ಸಾಗರ: ಇಲ್ಲಿನ ವಿಧಾನಸಭಾ ಕ್ಷೇತ್ರಕ್ಕೆ ಬೇಳೂರು  ಗೋಪಾಲಕೃಷ್ಣರಿಗೆ ಟಿಕೆಟ್ ನಿರಾಕರಿಸಲಾಗಿದೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದ್ದಂತೆ ಕುಪಿತಗೊಂಡ ಬೇಳೂರು ಬೆಂಬಲಿಗರು, ಸಾಗರ ಬಿಜೆಪಿ ಯುವಮೋರ್ಚಾ ಆಧ್ಯಕ್ಷ ಗಣೇಶ್ ಗಟ್ಟಿ ಯೆನ್ನುವವರ ಮೇಲೆ ಮಾರಣಾಂತಿಕ ಹಲ್ಲೆ ನೆಡೆಸಿದ ಬಗ್ಗೆ ವರದಿಯಾಗಿದೆ ಎಂದು ನಿನ್ನೆ ಪ್ರಕಟವಾದ ವರದಿ ಬಗ್ಗೆ ಇಂದು ಸತ್ವಾಧಾರ ನ್ಯೂಸ್ ಗೆ ಅಶೋಕ ಬೇಳೂರು ಪ್ರತಿಕ್ರಿಯೆ ನೀಡಿದ್ದಾರೆ.

ಹತಾಶ ಭಾವನೆಯಿಂದ ಗಣೇಶನ‌ ಮೇಲೆ ಹಲ್ಲೆ ಅಂತ. ಆ ಗಲಾಟೆ ಆಗಿದ್ದು ವಯಕ್ತಿಕ ಕಾರಣಕ್ಕಾಗಿಯೇ ಹೊರತು ರಾಜಕೀಯ ಕಾರಣಕ್ಕಲ್ಲ. ಹಾಲಪ್ಪ ಬೆಂಬಲಿಗರಿಗೆ ಹೊಡೆಯಬೇಕೆಂಬ ಉದ್ದೇಶ ನಮಗೆ ಇದ್ದಿದ್ದರೆ ಗಣೇಶನ ಜೊತೆ ಗಲಾಟೆ ಆಗುವ ಅರ್ಧ ಗಂಟೆಯಿಂದಲೂ ಗಲಾಟೆ ನಡೆದ ಜಾಗದಲ್ಲಿ ನಮ್ಮ ಜೊತೆ ಹಾಲಪ್ಪ ಅವರ ಆಪ್ತ ಆನಂದ್ ಎಂಬುವವರು ಮಾತನಾಡುತ್ತಿದ್ದರು ಆದರೆ ಆನಂದ್ ಮೇಲೆ ಹಲ್ಲೆ ಯಾಕೆ ನಾವು ಮಾಡಿಲ್ಲ?

RELATED ARTICLES  ಮೋದಿ ಸರ್ಕಾರದಿಂದ ರೈತರಿಗೆ ಭರ್ಜರಿ ಗುಡ್ ನ್ಯೂಸ್..!

ಇದು ಗಣೇಶ ಪಾನಮತ್ತನಾಗಿ ಮಾತನಾಡಿ ವಿನಯ್ ಮೇಲೆ ಹಲ್ಲೆ ಮಾಡಿದ್ದರ ಪರಿಣಾಮ ಆದ ಗಲಾಟ ಅಷ್ಟೆ.. ಇದರಲ್ಲಿ ಯಾವ ರಾಜಕಾರಣದ ಉದ್ದೇಶವು ಇಲ್ಲ.

ಬಂಟಿಂಗ್ಸ್ ಕಟ್ಟುವಾಗ ಗಣೇಶ ಇರಲೇ ಇಲ್ಲ. ಗಣೇಶ ಬಂದಾಗ ಬಂಟಿಂಗ್ಸ ಕಟ್ತಾನೇ ಇರ್ಲಿಲ್ಲ. ಪಾನನತ್ತನಾಗಿ ಬಂದ ಗಣೇಶ ವಿನಯ್ ಮೇಲೆ ಹಲ್ಲೆಗೆ ಮುಂದಾದಾಗ ಗಲಾಟೆ ಆಗಿದೆ ಅಷ್ಟೆ. ಸಾಕ್ಷಿದಾರರಾದ ರಾಮ್ಪ್ರಸಾದ್ ಇದ್ದಾರೆ. ಪಕ್ಷದ ಹಿರಿಯರ ಮುಂದೆ ನಡೆದ ವಿಚಾರವನ್ನು ತಿಳಿಸಿದ್ದಾರೆ, ಸತ್ಯ ಪಕ್ಷದವರಿಗೂ ತಿಳಿದಿದೆ.

ಮೊನ್ನೆ ನಡೆದ ಗಲಾಟೆಗೂ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ. ಗಣೇಶ್ ಗಟ್ಟಿಯ ದುರಾವರ್ತನೆ ಹಾಗೂ ದುರಹಂಕಾರದ ಮಾತುಗಳು ಈ ಗಲಾಟೆಗೆ ಕಾರಣವಾಗಿದೆ. ಸ್ನೇಹಿತರ ಜೊತೆ ಮಾತನಾಡುತ್ತಿರುವಾಗ ಅಲ್ಲಿಗೆ ಬಂದ ಗಣೇಶ್ ನ ನೋಡಿ ನಮ್ಮ ಸ್ನೇಹಿತ ವಿನಯ್ ಇವರೇನಾ ಗಣೇಶ್ ಗಟ್ಟಿ ಅಂತ ಕೇಳಿದ ಇದರಿಂದ ಕುಪಿತನಾದ ಗಣೇಶ್ ನಾನು ಸಾಗರ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ನನಗೆ ಇವನಾ ಅಂತ ಕೇಳ್ತಿಯಾ ಅಂತ ವಿನಯ್ ಮೇಲೆ ಗಲಾಟೆ ಮಾಡಿದ ನಂತರ ವಿನಯ್ ಮೇಲೆ ಬಿಜೆಪಿ ಬಾವುಟ ಹಾಕುವ ಕೋಲಿನಿಂದ ಹಲ್ಲೆ ಮಾಡಿದ ನಂತರ ನಮ್ಮ ಕಡೆಯವರು ಗಣೇಶನಿಗೆ ಹೊಡೆದರಷ್ಟೆ. ಗಾಯವಾಗುವ ಹಲ್ಲೆ ಮಾಡಿಲ್ಲ. ನಾನು ಸ್ನೇಹಜೀವಿ, ಎಲ್ಲರನ್ನು ಸಮಾನವಾಗಿ ಕಾಣುವವ . ನಾನು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಆಗಿರುವುದರಿಂದ ಗಲಾಟೆ ಮಾಡುವ , ಮಾಡಿಸುವ ಅಗತ್ಯ ಇಲ್ಲ. ಅದರಲ್ಲೂ ಬೇಳೂರರವರು ನನ್ನ ಚಿಕ್ಕಪ್ಪ ಆಗಿರುವುದರಿಂದ ಗಲಾಟೆ ಮಾಡಿಕೊಂಡು ಬೇಳೂರವರಿಗೆ ತೊಂದರೆ ಮಾಡುವ ಗೋಜಿಗೆ ನಾನು ಹೋಗುವುದಿಲ್ಲ.. ಇದೆಲ್ಲ ರಾಜಕೀಯ ಪಿತೂರಿಯಷ್ಟೆ ಎಂದು ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಅಶೋಕ ಬೇಳೂರು ಪ್ರತಿಕ್ರಿಯೆ ನೀಡಿದ್ದಾರೆ.

RELATED ARTICLES  ಉತ್ತರಕನ್ನಡದ ಇಂದಿನ ಕೊರೋನಾ ಅಪ್ಡೇಟ್