ಮಿರ್ಜಾನಿನ ಛತ್ರಕೂರ್ವೆಯಲ್ಲಿ ಶ್ರೀ ಜಟಕೇಶ್ವರ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಹಮ್ಮಿಕೊಂಡ ನಾಲ್ಕನೇ ವರ್ಷದ ಸೂಪರ ಸಿಕ್ಸ್ ಕ್ರಿಕೆಟ್ ಪಂದ್ಯಾವಳಿಯ ಕಾರ್ಯಕ್ರಮವನ್ನು ವೇದಿಕೆಯಲ್ಲಿ ಎಲ್ಲಾ ಗಣ್ಯರು ಸಾಮೂಹಿಕವಾಗಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

facebook 1514182122576

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆಯವರು ಕ್ರಿಕೆಟ್ ಮೈದಾನದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ ಯಶಸ್ವಿಯಾಗಿ ನಾಲ್ಕನೇ ವರ್ಷಕ್ಕೆ ಕಾಲಿಡುತ್ತಿರುವ ಈ ಪಂದ್ಯಾವಳಿಯ ಸುಸಜ್ಜಿತ ಮೈದಾನವು ಇಲ್ಲಿನ ಆಯೋಜಕರ ಕಾರ್ಯತತ್ಪರತೆಯನ್ನು ಎತ್ತಿ ತೋರಿಸುತ್ತದೆ. ಇವರ ಈ ಪಂದ್ಯಾವಳಿಯು ಇನ್ನೂ ಜನಪ್ರಿಯವಾಗಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಲಿ ಎಂದು ಕ್ರೀಡೆಯ ಮಹತ್ವದ ಬಗ್ಗೆ ವಿವರಿಸುತ್ತಾ ಪಂದ್ಯಾವಳಿಯ ಸಂಘಟನೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಎಲ್ಲ ತಂಡಗಳಿಗೂ ಶುಭಹಾರೈಸಿದರು.

RELATED ARTICLES  ಶ್ರೀ ಗುರುಕೃಪಾದಲ್ಲಿ ಫೇ 12 ರ ವರೆಗೆ ಜಾತ್ರಾ ಸಂಭ್ರಮ

ಇದೇ ಸಂದರ್ಭದಲ್ಲಿ ಮಾತನಾಡಿದ ದಿನಕರ ಶೆಟ್ಟಿ ಅವರು ಪಂದ್ಯಾವಳಿಯ ಸಂಘಟಕರನ್ನು ಶ್ಲಾಘಿಸಿ ಅವರಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಕ್ಲಬ್ ನ ಅಧ್ಯಕ್ಷ ಗಣೇಶ ಅಂಬಿಗ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES  ರಾಷ್ಟ್ರಮಟ್ಟದ ಪ್ರತಿಭೆ ಬಾಡದ ಪ್ರಥಮ್