ಅಂಕೋಲಾ : ಉತ್ತಮ ಕೃತಿಗಳ ಓದು ನಮ್ಮ ಮನಸ್ಥಿತಿಯನ್ನು ವಿಸ್ತ್ರತಗೊಳಿಸುತ್ತದೆ. ಹಾಗೂ ಲೋಕಜ್ಞಾನವನ್ನು ನೀಡುತ್ತದೆ. ವಿದ್ಯಾರ್ಥಿಗಳಿಗೆ ಓದು ಇಂದು ಅಗತ್ಯವಾಗಿದ್ದು, ದಿನದ ಒಂದು ಗಂಟೆಯನ್ನು ಉತ್ತಮ ಪುಸ್ತಕ ಓದಿಗಾಗಿ ಮೀಸಲಿಡಿ ಎಂದು ಪಿ.ಎಮ್.ಜ್ಯೂನಿಯರ್ ಕಾಲೇಜಿನ ಉಪನ್ಯಾಸಕ ಶ್ರೀ ಉಲ್ಲಾಸ ಹುದ್ದಾರ ಇವರು ವಿದ್ಯಾರ್ಥಿಗಳಿಗೆ ಹೇಳಿದರು.
ಅವರು ಪುರಲಕ್ಕಿಬೇಣದಲ್ಲಿ ನಡೆದ ಜಿ.ಸಿ.ಪದವಿ ಕಾಲೇಜಿನ ಎನ್.ಎಸ್.ಎಸ್ ವಾರ್ಷಿಕ ಶಿಬಿರದಲ್ಲಿ ‘ಪುಸ್ತಕ ಪ್ರೀತಿ ಮತ್ತು ಜೀವನದ ಮೌಲ್ಯ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ್ದರು. ಶಿಬಿರಾರ್ಥಿ ಜ್ಯೋತಿ ನಾಯ್ಕ ಪ್ರಾರ್ಥಿಸಿದರು. ಆಶಿಕಾ ನಾಯ್ಕ ಸ್ವಾಗತಿಸಿದರು.ಎನ್.ಎಸ್.ಎಸ್ ತಂಡದ ನಾಯಕ ತೇಜಸ್ ನಾಯಕ ಸರ್ವರನ್ನು ವಂದಿಸಿದರು. ಕುಮಾರಿ ಪ್ರಿಯಾಂಕಾ ಭಟ್ ಕಾರ್ಯಕ್ರಮ ನಿರೂಪಿಸಿದದಳು. ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಡಾ. ಎಸ್.ಆರ್. ಶಿರೋಡಕರ ಇವರು ಸಾಂದರ್ಭಿಕ ಮಾತನಾಡಿದರು.

RELATED ARTICLES  ವಿದ್ಯುತ್ ವಾಹಕ ಹಾಗೂ ಪರಿವರ್ತಕಗಳನ್ನು ಮೇಲ್ದರ್ಜೆಗೆ ಏರಿಸುವ ಕಾರ್ಯಕ್ಕೆ ಚಾಲನೆ‌ ನೀಡಿದ ಶಾಸಕಿ‌ ಶಾರದಾ ಶೆಟ್ಟಿ.