ದಾಂಡೇಲಿ :ಮಾನವಾರಾಗಿ ಹುಟ್ಟಿ ಬರುವುದೇ ಒಂದು ದೊಡ್ಡ ಭಾಗ್ಯ, ಮನುಷ್ಯನಾಗಿ ಹುಟ್ಟಿ ಬರುವ ಪ್ರತಿಯೊಬ್ಬರು ಪುನಿತರೇ ಇಂತಹ ಜೀವನ ಭಾಗ್ಯ ಪಡೆದು ಮಾನವ ಧರ್ಮ ಪಾಲಿಸಿ, ಪ್ರತಿಯೊಂದು ಜಾತಿ, ಧರ್ಮಿಯರೊಂದಿಗೂ ಪ್ರೀತಿ ವಾತ್ಸಲ್ಯದಿಂದ ಸಹ ಬಾಳ್ವೇಯಿಂದ ಬದುಕುವ ಪ್ರಯತ್ನವನ್ನು ಮಾಡಬೇಕು. ಇದು ಇಂದಿನ ಯಾಂತ್ರಿಕ ಜೀವನದಲ್ಲಿ ಅತೀ ಅವಶ್ಯವಾಗಿದೆ ಎಂದು ಉಳವಿ ಚನ್ನಬಸವೇಶ್ವರ ದೇವಸ್ಥಾನ ಮುಖ್ಯ ಅರ್ಚಕ ಶಂಕ್ರಯ್ಯ ಸ್ವಾಮಿ ಕಲ್ಮಠ ನುಡಿದರು.
ಅವರು ವೆಸ್ಟ್‍ಕೊಸ್ಟ್ ಕಾಗದ ಕಾರ್ಖಾನೆಯ ರಂಗನಾಥ ಸಭಾಭವನದಲ್ಲಿ ಕರ್ನಾಟಕ ಅರಣ್ಯ ಇಲಾಖೆಯ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘಃದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆÀಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಪಿಸಿಸಿಎಪ್ ಪಿ.ಜೆ ಹೊಸಮಠ ಮಾತನಾಡಿ ಸಂಘವು ಸಂಘದ ಸದಸ್ಯರ ಬಾಂದ್ಯವ ಹೆಚ್ಚಿಸುವÀಲ್ಲಿ ಹಾಗೂ ಸದಸ್ಯರ ಕುಂದುಕೊರತೆ ನಿವಾರಿಸುವಲ್ಲಿ ಹೆಚ್ಚು ಅನಕೂಲಕರ ಕಾರ್ಯಗಳನ್ನು ನಿರ್ವಹಿಸುತ್ತಿರುವದು ಹೆಮ್ಮೆಯ ವಿಷಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಿರಸಿಯ ಮುಖ್ಯ ಸಂರಕ್ಷಣಾಧಿಕಾರಿ ಅಶೋಕ ಬಿ ಬಾಸರಕೊಡ ಸಂಘ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕು ಸಹಾಯ ಮಾಡುತ್ತಿದ್ದು ಬರುವ ದಿನಗಳಲಿ ಸಂಘ ತನ್ನದೆ ಆದ ಒಂದು ನಿವೇಶನದಲ್ಲಿ ಸಂಘದ ಪ್ರಧಾನ ಕಚೇರಿಯನ್ನ ನಿರ್ಮಿಸಲಿದೆ ಹಾಗೂ ನೌಕರ ಸಂಘ ಮುಂಬರುವ ಸಮಾವೇಷದಲ್ಲಿ ಸದಸ್ಯರ ಮಕ್ಕಳಿಗೆ ಅನಕೂಲವಾಗುವಂತೆ ವಧುವರರ ಅನ್ವೇಷಣೆ ಹಮ್ಮಿಕೊಳ್ಳುವ ಕುರಿತು ಪ್ರಯತ್ನಿಸಲಾಗುವದು ಎಂದರು. ವೇದಿಕೆಯಲ್ಲಿ ಮುಖ್ಯ ಅರಣ್ಯ ಸಂರಕ್ಷಣಾದಿಕಾರಿ ಬಿ.ಬಿ.ಮಲ್ಲೇಶ, ಡಿಸಿಎಪ್ ಅಮ್ಮೊನವರ, ಎಸ್.ಎನ್.ಕುಲಕರ್ಣಿ ಎನ್.ಬಿ.ಮಂಜುನಾಥ, ಪಂಪ ಶಿವಯ್ಯ, ಸಿ.ಪಿ.ಪ್ರಕಾಶ, ಎಸಿಎಪ್‍ಗಳಾದ ಎಸ್.ಬಿ.ಮರಿಗೊಲಪ್ಪನವರ, ಎಸ್.ಎಸ್.ಪಾಟೀಲ, ಎ.ಎಂ.ಮುತೃಂಜಯ್ಯಪ್ಪ, ಎ.ಬಿ ಪಾಟಿಲ ಉಪಸ್ಥಿತರಿದ್ದರು.
2017ನೇ ಸಾಲಿನ ಎಸ ಎಲ್‍ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಸದಸ್ಯÀರ ಮಕ್ಕಳಿಗೆ ಬಹುಮಾನ ಹಾಗೂ ಪಾರಿತೊಷಕ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಹಿರಿಯ ವೈದ್ಯರಾದ ಡಾ. ಎನ್.ಜಿ ಬ್ಯಾಕೊಡ, ನಿವೃತ್ತ ಯು.ಎಸ್. ಪಾಟೀಲ, ಸಂಗೀತ ಕ್ಷೇತ್ರದ ಸಾಧನೆಗಾಗಿ ಅಕ್ಷತಾ ಪರಿಸರ ಕ್ಷೇತ್ರದ ಸಾಧನೆಗಾಗಿ ಸವಿತಾ ನಿಂಬರಗಿಯವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸಂಘದ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಗಳನ್ನು ಕೂಡ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಎಪಿಸಿಸಿಎಪ್ ಪುಟ್ಟಬುದ್ದಿ ಪ್ರಾಸ್ತಾವಿಕ ಮಾತನ್ನಾಡಿ ಸಂಘದ ಉದ್ದೇಶಗಳನ್ನು ವಿವರಿಸಿದರು. ಪ್ರಶಾಂತ ಪಿಕೆಎಂ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕ ಎಂ.ಸಿ ಹೀರೆಮಠ ನಿರೂಪಿಸಿದರು. ಎಸಿಎಪ್ ಆನಂದ ಕೆ.ಸಿ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಸಂಘದ ಕಾರ್ಯಕಾರಿ ಸಮಿತಿಯ ಸಭೆ ಜರುಗಿತು.