ಕಾರವಾರ: ಕರಾವಳಿ ಖಾದ್ಯ ಹಾಗೂ ಜಿಲ್ಲೆಯ ಸಿರಿಧಾನ್ಯಗಳನ್ನು ಪರಿಚಯಿಸಲು ಇಲ್ಲಿನ ಕಾಳಿ ರಿವರ್ ಉದ್ಯಾನವನದಲ್ಲಿ ಐದು ದಿನಗಳ ಕಾಲ ಆಯೋಜಿಸಿರುವ ಕಾರವಾರ ಆಹಾರ ಮೇಳಕ್ಕೆ ಮಂಗಳವಾರ ಚಾಲನೆ ದೊರೆತಿದ್ದು, ನೆಚ್ಚಿನ ಖಾದ್ಯಗಳ ಸವಿ ಸವಿಯಲು ಜನರು ಮುಗ್ಗಿಬಿದ್ದಿದ್ದರು.

ಇಲ್ಲಿನ ಕಾಳಿ ನದಿಯ ದಂಡೆಯ ಮೇಲಿರುವ ಕಾಳಿ ರಿವರ್‌ ಗಾರ್ಡನ್‌ನಲ್ಲಿ ಇದೇ ‘ಕಾರವಾರ ಆಹಾರ ಮೇಳ’ವನ್ನು ಮೊದಲ ಬಾರಿಗೆ ಆಯೋಜಿಸಲಾಗಿದ್ದು, ಕರಾವಳಿಯ ವಿಶೇಷ ಖಾದ್ಯಗಳು ತಿಂಡಿಪ್ರಿಯರ ಬಾಯಲ್ಲಿ ನೀರು ತರಿಸುತ್ತಿವೆ.

ಪ್ರವಾಸೋದ್ಯಮ ಇಲಾಖೆ, ಉತ್ತರ ಕನ್ನಡ ಪ್ರವಾಸಿ ತಾಣಗಳ ಅಭಿವೃದ್ಧಿ ಮತ್ತು ಸಂರಕ್ಷಣಾ ಸಮಿತಿಯ ಸಹಯೋಗದಲ್ಲಿ ಲೀಸರ್‌ ರೂಟ್ಸ್‌ ಸಂಸ್ಥೆಯು ಈ ಮೇಳವನ್ನು ಆಯೋಜಿಸಿದ್ದು, ಐದು ದಿನಗಳವರೆಗೆ ನಡೆಯಲಿದೆ. ಆಹಾರ ತಯಾರಿಕಾ ಕೆಲ ಸಂಸ್ಥೆಗಳು ಮೇಳದಲ್ಲಿ ಭಾಗವಹಿಸುತ್ತಿದ್ದು, ಸುಮಾರು 70ಕ್ಕೂ ಅಧಿಕ ನಮೂನೆಯ ಖಾದ್ಯಗಳು ಇಲ್ಲಿ ಸವಿಯಲು ಸಿಗುತ್ತಿವೆ.

RELATED ARTICLES  ಶಾರದಾ ಮೋಹನ‌ ಶೆಟ್ಟಿಯವರ ಪರವಾಗಿ ಪ್ರಚಾರ ಪ್ರಾರಂಭ: ಕಾರ್ಯಕರ್ತರ ಪಡೆ ಸಿದ್ಧಗೊಳಿಸಿದ ರವಿಕುಮಾರ ಶೆಟ್ಟಿ.

ವದವ

ವಿವಿಧ ನಮೂನೆಯ ಬಿರಿಯಾನಿ, ಸಮುದ್ರ ಆಹಾರಗಳು, ಕರಾವಳಿಯ ತಿಂಡಿ– ತಿನಿಸುಗಳು, ಚಾಟ್ಸ್, ಸಾವಯವ ಆಹಾರಗಳು, ಚೈನೀಸ್‌ ಆಹಾರಗಳು ಇಲ್ಲಿ ದೊರೆಯಲಿವೆ. ವಿಶೇಷವಾಗಿ ಕಾರವಾರ ಹಾಗೂ ಮಂಗಳೂರು ಶೈಲಿಯ ಆಹಾರಗಳು ಇಲ್ಲಿ ಗಮನ ಸೆಳೆಯುತ್ತಿವೆ.

ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಮತ್ಸದರ್ಶಿನಿ ಮಳಿಗೆಯಲ್ಲಿ ಸಿಗಡಿ (ಪ್ರಾನ್ಸ್‌), ಏಡಿ, ಕಿಂಗ್‌ ಫಿಶ್‌, ಸಾಲ್‌ಮೊನ್‌, ಸ್ಕ್ವಿಡ್‌, ಪಾಂಪ್ಲೆಟ್‌, ಫಿಶ್‌ ಕಟ್‌ಲೆಟ್‌, ಫಿಶ್‌ ಕಬಾಬ್‌, ಲ್ಯಾಬ್‌ಸ್ಟರ್‌ ಬೈಟ್‌, ಫಿಶ್‌ ಫಿಂಗರ್‌ ಖಾದ್ಯಗಳಿವೆ.

ಇನ್ನು ರತ್ನಾಸ್‌ ಕೆಎ–30 ಸಂಸ್ಥೆಯಿಂದ ಮಂಗಳೂರಿನ ಕೋರಿ ರೋಟಿ, ನೀರ್‌ದೋಸೆ ಜತೆ ಚಿಕ್ಕನ್ ಸುಕ್ಕಾ, ಚಿಕನ್ ಘೀ ರೋಸ್ಟ್‌ ಸೇರಿದಂತೆ ಕರಾವಳಿ ಖಾದ್ಯಗಳು ಸಿದ್ಧವಾಗುತ್ತಿದೆ. ಶ್ರೀಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ವತಿಯಿಂದ ಸಿರಿ ಧಾನ್ಯ ಆಹಾರಗಳು ಇಲ್ಲಿ ಸಿಗಲಿದೆ.

ಆಹಾರ ಮೇಳದಲ್ಲಿ ವಿಶೇಷವಾಗಿ ಕರಾವಳಿಯ ಮತ್ಸ್ಯರುಚಿಗೆ ಜನ ಖಾತರರಾಗಿದ್ದರು. ವಿವಿಧ ಬಗೆಯ ಮತ್ಸ್ಯ ತಿನಿಸುಗಳನ್ನು ಒಂದೇ ಸೂರಿನಡಿ ಇರಿಸಲಾಗಿದ್ದು ಮೀನುಪ್ರಿಯರಿಗೆ ಹಬ್ಬದ ವಾತಾವರಣ ದೊರೆತ ಅನುಭವವಾಗಿದೆ. ಇದಲ್ಲದೇ ಧಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆ ಸಹಯೋಗದಲ್ಲಿ ಸಸ್ಯಹಾರ ಹಾಗೂ ಬಗೆ ಬಗೆಯ ದಾನ್ಯಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ.

RELATED ARTICLES  ಮದುವೆ ಕಾರ್ಯ ಮುಗಿಸಿ ಬರುವಾಗ ಅಪಘಾತ: ಹೊನ್ನಾವರದಲ್ಲಿ ನಡೆದ ಘಟನೆಯಲ್ಲಿ ಮೂವರ ಸಾವು.

ಆಹಾರ ಮೇಳಕ್ಕೆ ಶಾಸಕ ಸತೀಶ್ ಸೈಲ್ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಇದೇ ಮೊದಲ ಭಾರಿಗೆ ಕಾಳಿ ನದಿ ತೀರದಲ್ಲಿ ಆಯೋಜಿಸಿರುವ ಆಹಾರ ಮೇಳೆ ಉತ್ತಮವಾಗಿದೆ. ಜನರಿಗೆ ತಮ್ಮಿಷ್ಟದ ಖಾದ್ಯಗಳನ್ನು ಸವಿಯಲು ಅದ್ಬುತ ಅವಕಾಶ ಲಭಿಸದಂತಾಗಿದೆ. ಕೆಎಫ್‍ಡಿಸಿಯ ಮತ್ಸ್ಯದರ್ಶಿನ ಆಹಾರ ಮಳಿಗೆ ಹೆಚ್ಚು ಆಕರ್ಷಕವಾಗಿದೆ. ಮತ್ಸ್ಯದ ಖಾದ್ಯಗಳು ಮತ್ಸ್ಯದರ್ಶಿನಿ ಎನ್ನುವ ಯೋಜನೆಯ ಮೂಲಕ ಸರಕಾರ ಪ್ರಾರಂಭಿಸಿದೆ. ಇದು ರಾಜ್ಯದಲ್ಲಿ ಹೆಚ್ಚು ಪ್ರಖ್ಯಾತಿ ಪಡೆದುಕೊಂಡಿದೆ. ಅಲ್ಲದೆ ಇದರಲ್ಲಿ ಹೆಚ್ಚಿನ ಯುವಕರು ದುಡಿಯುತ್ತಿದ್ದು ಹೆಚ್ಚಿನ ಜನರಿಗೆ ಉದ್ಯೋಗ ಕಲ್ಪಿಸಲು ಸಹ ಸಹಕಾರಿಯಾಗಿದೆ ಎಂದರು.