ದೇವರಿಗೆ ಬಾಳೆ ಹಣ್ಣು ಮತ್ತು ತೆಂಗಿನಕಾಯಿಯನ್ನು ನಾವು ದೇವಸ್ಥಾನಕ್ಕೆ ಹೋಗುವಾಗ ಏಕೆ ತೆಗೆದುಕೊಂಡು ಹೋಗುತ್ತೇವೆ ಗೊತ್ತೇ ?
ಬೇರೆ ಯಾವ ಹಣ್ಣನ್ನು ಯಾಕೆ ನಾವು ತೆಗೆದುಕೊಂಡು ಹೋಗುವುದಿಲ್ಲ ಎಂದು ನಿಮಗೆ ಗೊತ್ತೇ.
ಬನ್ನಿ ತಿಳಿದುಕೊಳ್ಳೋಣ.
ಸಾಮಾನ್ಯವಾಗಿ ನಾವು ಯಾವುದೇ ಹಣ್ಣು ಅಥವಾ ಕಾಯಿಯನ್ನು ಅದರ ಪ್ರತ್ಯೇಕ ಹೆಸರನ್ನು ಬಳಸಿಯೇ ಹೇಳುತ್ತೇವೆ.
ಆದರೆ ಬರೀ ಕಾಯಿ ಎಂದರೆ ಅದು ತೆಂಗಿನಕಾಯಿ, ಹಣ್ಣು ಎಂದರೆ ಬಾಳೆಹಣ್ಣನ್ನೇ ಸೂಚಿಸುತ್ತದೆ. ಮನೆಯ ಹಿರಿಯರು ದೇವಸ್ಥಾನಕ್ಕೆ ಹೋಗಿ ಹಣ್ಣು-ಕಾಯಿ ಮಾಡಿಸಿಕೊಂಡು ಬಾ ಎನ್ನುತ್ತಾರೆ.
ಪೂಜೆಗಳಲ್ಲಿ ಹೂವು ನೈವೇದ್ಯದ ಪದಾರ್ಥಗಳು, ಪತ್ರೆಗಳಲ್ಲಿ ಕೂಡ ಭಿನ್ನತೆಯಿರುವಾಗ ಎಲ್ಲಾ ದೇವರಿಗೂ ಬಾಳೆ ಹಣ್ಣು ನಿವೇದಿಸುತ್ತಾರೆ.
ಹೆಚ್ಚಾಗಿ ನಾವು ಒಂದು ಹಣ್ಣನ್ನೂ ತಿಂದು ಬೀಜವನ್ನು ಎಸೆದಾಗ ಅಥವಾ ಪಕ್ಷಿ, ಮೃಗಗಳ ಮೂಲಕ ಎಲ್ಲಿಯಾದರೂ ಬಿದ್ದಾಗ ಅವು ಮೊಳಕೆಯೊಡೆದು ಗಿಡವಾಗಿ ಬೆಳೆಯುತ್ತವೆ.
ಆದರೆ ಬಾಳೆಹಣ್ಣನ್ನು ಸುಲಿದು ಸಿಪ್ಪೆಯಾಗಿ ಅಥವಾ ಇಡೀ ಬಾಳೆಹಣ್ಣನ್ನೇ ಹಾಗೆ ಎಸೆದರು ಅದು ಮತ್ತೆ ಬೆಳೆಯುವುದಿಲ್ಲ.
ತೆಂಗಿನಕಾಯಿಯೂ ಅಷ್ಟೆ ಒಮ್ಮೆ ಒಡೆದರೆ ಅದರಿಂದ ಗಿಡ ಹುಟ್ಟುವುದಿಲ್ಲ .
ಹಾಗೆಯೇ ಈ ಜನ್ಮವನ್ನು ಮುಗಿಸಿಬಿಟ್ಟರೆ ಮತ್ತೆ ಜನ್ಮವಿಲ್ಲದ ಮುಕ್ತಿಯನ್ನು ಭಗವಂತನಲ್ಲಿ ಬೇಡುವುದಕ್ಕಾಗಿಯೇ ಇವೆರಡನ್ನೂ ನೈವೇದ್ಯ ಮಾಡುವ ಪದ್ದತಿಯನ್ನು ನಮ್ಮ ಹಿರಿಯರು ಮಾಡಿರುವರು.ನಮ್ಮ ಹಿರಿಯರು ಏನೇ ಮಾಡಲಿ ಅದಕ್ಕೊಂದು ಅರ್ಥವಿರುತ್ತದೆ.
ಅಷ್ಟೇ ಅಲ್ಲ ಬಾಳೆ ಮರದ ಕಂದೇ ಇನ್ನೊಂದು ಮರವಾಗುತ್ತೆ;ಉಪಯೋಗಿಸದ ತೆಂಗು ಇಡೀ ಕಾಯಿಯಿಂದಲೇ ಬೆಳೆಯುತ್ತದೆ. ಅರ್ಥಾತ್ ಎಂಜಲಿನಿಂದ ಬೆಳೆಯುವುದಿಲ್ಲ.
ಪರಿಶುದ್ಧವಾದ ಪದಾರ್ಥಗಳೇ ದೇವರಿಗೆ ಅರ್ಪಿಸಲು ಯೋಗ್ಯ