ಗ್ರಾಹಕರಿಗೆ ಹಿಂದೆಂದಿಗಿಂತಲೂ ಅಭೂತಪೂರ್ವ ಲಾಭವನ್ನು ಕೊಡುವ ಹೊಸ ಪ್ರೀಪೇಯ್ಡ್  ‘ಸರ್ಪೈಸ್ ಕ್ಯಾಷ್ ಬ್ಯಾಕ್’ ಯೋಜನೆಯನ್ನು ಜಿಯೋ ಬಿಡುಗಡೆ ಮಾಡಿದೆ.

ಹೊಸ ವರ್ಷದ ಕೊಡುಗೆಯಾಗಿ ಜಿಯೋ ತನ್ನ ಬಳಕೆದಾರರಿಗೆ 399 ರೂ. ರಿಚಾರ್ಜ್ ಮಾಡಿದರೆ 3,300 ರೂ. ತನಕದ ಕ್ಯಾಶ್‍ಬ್ಯಾಕ್‍ ಆಫರ್ ಪಡೆಯುವ ಸುವರ್ಣಾವಕಾಶವೊಂದನ್ನು ಹೊರತಂದಿದೆ. ಜಿಯೋ ಈಗಾಗಲೇ 199 ರೂ. ಮತ್ತು 299 ರೂ.ನ ಎರಡು ವಿನೂತನ ಮಾಸಿಕ ಪ್ಲಾನ್‍ಗಳನ್ನು ಬಿಡುಗಡೆಗೊಳಿಸಿದೆ. ಈಗ ಗ್ರಾಹಕರಿಗೆ ಮತ್ತಷ್ಟು ಅನುಕೂಲ ಒದಗಿಸಲು ಹೊಸ ಕ್ಯಾಷ್ ಬ್ಯಾಕ್ ಆಫರ್ ತಂದಿದೆ.

RELATED ARTICLES  ಅಪರಿಚಿತ ಮಹಿಳೆಯ ಶವ ಪತ್ತೆ.

ಆದರೆ ಈ ಕ್ಯಾಷ್ ಬ್ಯಾಕ್ ಆಫರ್ ಗಳನ್ನು ಪಡೆಯುವ ವಿಧಾನ ಸ್ವಲ್ಪ ವಿಶಿಷ್ಟವಾಗಿದ್ದು, ಹೀಗೆ ಪಡೆಯಬಹುದು;

ಮೈ ಜಿಯೋ ಕ್ಯಾಶ್‍ಬ್ಯಾಕ್ ನಿಂದ 400 ರೂ.ಗಳ ವೋಚರ್‌ಗಳು

300 ರೂ. ತನಕ ತಕ್ಷಣದ ಕ್ಯಾಶ್‍ಬ್ಯಾಕ್ ವೋಚರ್‌ಗಳು

ಡಿಜಿಟಲ್ ವ್ಯಾಲೆಟ್ ನಲ್ಲಿ 2,600 ರೂ. ವೋಚರ್ ಗಳು

ನೀವು ಈ ಲಾಭ ಪಡೆಯಬೇಕಾದರೆ ಜನವರಿ 15, 2018ರೊಳಗೆ ರೀಚಾರ್ಜ್ ಮಾಡಿಸಬೇಕು ಮತ್ತು ಈ ರೀಚಾರ್ಜ್ ಅವಧಿ ಮಾರ್ಚ್ 31, 2018ರವರೆಗೆ ಚಾಲ್ತಿಯಲ್ಲಿರುತ್ತದೆ.

ಜಿಯೋ ನೆಟ್‌ವರ್ಕ್‌ನಲ್ಲಿ ನಲ್ಲಿ ರಿಚಾರ್ಜ್ ಮಾಡಿಕೊಂಡರೆ ತಲಾ 50ರೂ ಒಟ್ಟು 8 ಕ್ಯಾಷ್ ಬ್ಯಾಕ್ ಹಿಂದಿರುಗಿ ಬರಲಿದೆ. ಇದರ ಒಟ್ಟು ಮೊತ್ತ 400ರೂ ನಿಮ್ಮ ಮೈ ಜಿಯೋ ಆಪ್‌ಗೆ ಬಂದು ಸೇರಿಕೊಳ್ಳಲಿದೆ.

RELATED ARTICLES  ಗಾಂಜಾ ಅಮಲಿನಲ್ಲಿ ಮಾನಿನಿಯರ ಹುಚ್ಚಾಟ : ಮಹಿಳಾ ಪೊಲೀಸ್ ಸಿಬ್ಬಂದಿಗೆ ಹಲ್ಲೆ.

ಜಿಯೋ ಇ-ವ್ಯಾಲೆಟ್‌ನೊಂದಿಗೆ ಪಾಲುದಾರಿಕೆಯನ್ನು ಹೊಂದಿದ್ದು, ಅಮೆಜಾನ್ ಪೇ, ಪೇಟಿಎಂ, ಫೋನ್ ಪೇ, ಮೊಬಿಕ್ವಿಕ್ ಆಕ್ಸಿಸ್ ಪೇ ಮತ್ತು ಫೀಚಾರ್ಜ್‌ನಲ್ಲಿ ರೀಚಾರ್ಜ್ ಮಾಡಿಸಿಕೊಂಡರೆ ತಕ್ಷಣದ ಕ್ಯಾಷ್ ಬ್ಯಾಕ್ ದೊರೆಯುತ್ತದೆ. ಅಮೆಜಾನ್ ಪೇನಲ್ಲಿ ಮಾಡಿದರೆ ರೂ.100 ಕ್ಯಾಷ್ ಬ್ಯಾಕ್, ಪೇಟೆಎಂ ನಲ್ಲಿ ರೂ.5೦ ಮತ್ತು ಮೊಬಿಕ್ವೀಕ್‌ನಲ್ಲಿ ರೂ.300 ಕ್ಯಾಷ್ ಬ್ಯಾಕ್ ಪಡೆಯಬಹುದಾಗಿದೆ.