ಕುಮಟಾ : ತಾಲೂಕಿನ ತೊರ್ಕೆ ಪಂಚಾಯತ್ ವ್ಯಾಪ್ತಿಯ ಮಾದನಗೇರಿಯಲ್ಲಿ ‘2017-18ನೇ ಸಾಲಿನ ಆರ್ಥಿಕ ವರ್ಷದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅನುದಾನ ಯೋಜನೆಯಡಿ’, ಅಂದಾಜು 35 ಲಕ್ಷ ಅನುದಾನದ ಸುಸಜ್ಜಿತ ಮೀನುಮಾರುಕಟ್ಟೆ ನಿರ್ಮಾಣ ಕಾಮಗಾರಿಗೆ ಶಾಸಕರು ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಾರದಾ ಮೋಹನ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು.

RELATED ARTICLES  ಕಾಂಗ್ರೆಸ್ ಸರಕಾರವು ತಂದಂತಹ ಯೋಜನೆಗಳ ಸದುಪಯೋಗಪಡಿಸಿಕೊಳ್ಳಬೇಕು : ಶಿವರಾಮ ಹೆಬ್ಬಾರ

ಪಂಚಾಯತ್ ಸದಸ್ಯರ, ಊರ ನಾಗರಿಕರ ಮತ್ತು ಅಧಿಕಾರಿಗಳ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿ ವಿಧಾನದಂತೆ ಭೂಮಿ ಪೂಜೆ ನೆರವೇರಿಸಿ ನಂತರ ಶಂಕುಸ್ಥಾಪನೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕುಮಟಾ ಹೊನ್ನಾವರ ಕ್ಷೇತ್ರದ ಶಾಸಕರು ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಾರದಾ ಮೋಹನ ಶೆಟ್ಟಿ, ಇಲ್ಲಿಯ ಜನತೆಗೆ ಅಗತ್ಯವಾಗಿದ್ದ ಹಾಗೂ ಜನರ ಬೇಡಿಕೆ ಪರಿಗಣಿಸಿ ಈ ಮೀನು ಮಾರುಕಟ್ಟೆಗೆ ಅನುದಾನ ಬಿಡುಗಡೆ ಮಾಡಿಸಲಾಗಿದೆ. ಅತ್ಯಂತ ಕಷ್ಟದಲ್ಲಿ ಬದುಕುವವರನ್ನು ಮೇಲೆತ್ತಿ ಅವರಿಗೆ ಬದುಕು ಕೊಡುವತ್ತ ನಮ್ಮ ಚಿಂತನೆ ನಡೆದಿದೆ. ಈ ಮಾರುಕಟ್ಟೆ ಇನ್ನು ಕೆಲ ದಿನದಲ್ಲಿ ಸುಸಜ್ಜಿತವಾಗಿ ನಿರ್ಮಾಣವಾಗಿ ಜನತೆಯ ಅನುಕೂಲಕ್ಕೆ ದೊರೆಯಲಿದೆ ಎಂದರು.

RELATED ARTICLES  ಹಿರೇಗುತ್ತಿ ಹೈಸ್ಕೂಲಿನಲ್ಲಿ ನೀರು ಮತ್ತು ನೈರ್ಮಲ್ಯ ಕುರಿತು ಚರ್ಚಾ ಸ್ಪರ್ಧೆ ಕಾರ್ಯಕ್ರಮ