ಕುಮಟಾ: ತಾಲ್ಲೂಕಿನ ಬರ್ಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರಿಯ ಪ್ರಾಥಮಿಕ ಶಾಲೆ ಗುಂದದ ಹತ್ತಿರ 2017-18ನೇ ಸಾಲಿನ ಆರ್ಥಿಕ ವರ್ಷದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ಬಾಕ್ಸ್ ಕಲ್ಪರ್ಟ ನಿರ್ಮಾಣಕ್ಕೆ ಅಂದಾಜು ಐದು ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು . ಈ ಬಾಕ್ಸ್ ಕಲ್ಪರ್ಟ ನಿರ್ಮಾಣಕ್ಕೆ ಶಾಸಕರು ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಶಾರದಾ ಮೋಹನ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು .

ಜನತೆಯ ಬಹುದಿನದ ಬೇಡಿಕೆಯಾಗಿದ್ದ ಈ ಕಾಮಗಾರಿ ನಿರ್ಮಾಣಕ್ಕೆ ಶಾಸಕರು ಮುತವರ್ಜಿ ವಹಿಸಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಅನುದಾನ ಕೊಡಿಸಿದ್ದಾರೆ .ಅಂದಾಜು ಸುಮಾರು ಐದು ಲಕ್ಷ ರೂಪಾಯಿಗಳ ಮೊತ್ತದಲ್ಲಿ ಕಾಮಗಾರಿ ನಿರ್ಮಾಣವಾಗಲಿದೆ .

RELATED ARTICLES  ಇಂದು ಉತ್ತರ ಕನ್ನಡದಲ್ಲಿ 59 ಜನರಲ್ಲಿ ಕೊರೋನಾ ಪಾಸಿಟೀವ್ : 110 ಜನ ಡಿಶ್ಚಾರ್ಜ

IMG 20171227 WA0005

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಶಾಸಕರಾದ ಶಾರದಾ ಮೋಹನ ಶೆಟ್ಟಿಯವರು ಜನತೆಯ ಅನುಕೂಲಕ್ಕೆ ಈ ಅನುದಾನವನ್ನು ಕೊಡಿಸಲಾಗಿದೆ.ಜನತೆಯ ಬೇಡಿಕೆಯನ್ನು ಈಡೇರಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಆ ನಿಟ್ಟಿನಲ್ಲಿ ಇದಕ್ಕೆ ಅನುದಾನ ಬಿಡುಗಡೆಯಾಗಿದ್ದು ಇದರ ಸದುಪಯೋಗ ದೊರೆಯಲಿದೆ ಎಂದರು .

75% ಮಳೆಗಾಲದ ಅವಧಿಯಲ್ಲಿ ಶಾಲಾ ಹಾಗೂ ಸುತ್ತಲಿನ ಪ್ರದೇಶ ತೊಂದರೆಗೆ ಒಳಪಟ್ಟಿತು. ಈ ಒಂದು ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿಕೊಟ್ಟ ಶಾಸಕರಿಗೆ ಅಭಿನಂದನೆಗಳು ಎಂದು ಆಭಾಗದ ಜನರು ಪ್ರತಿಕ್ರಿಯೆ ನೀಡಿದರು.

RELATED ARTICLES  ದುಡಿದ ಹಣದಲ್ಲಿ ಪಾಲು ಕೊಡುತ್ತಿಲ್ಲ ಎಂಬ ಸಿಟ್ಟಿಗೆ ಮಗನನ್ನೇ ಕೊಲೆ ಮಾಡಿದ್ದ ಪ್ರಕರಣ : ಮಹತ್ವದ ತೀರ್ಪು ನೀಡಿದ ನ್ಯಾಯಾಲಯ.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ರಾಮ ಪಟಗಾರ, ಜಿ.ಪಂ ಸದಸ್ಯ ರತ್ನಾಕರ ನಾಯ್ಕ,ಇತರೆ ಜಿ.ಪಂ ಸದಸ್ಯರು, ಇಬ್ರಾಹಿಂ ಸಾಬ, ಸುರೇಶ್ ಪಟಗಾರ, ಬೊಮ್ಮಯ್ಯ ಪಟಗಾರ, ತಾರಾ ಗೌಡ, ಸುರೀಕ ವಾರೇಕರ, ಚಂದ್ರಹಾಸ ನಾಯಕ ಜಗದೀಶ ಹರಿಕಂತ್ರ, ವಿಮಲ ಹರಿಕಂತ್ರ ಇತರರು ಹಾಜರಿದ್ದರು.