ಶಿರಸಿ : ‌ಸಂವಿಧಾನವನ್ನು ಬದಲಿಸುತ್ತೇವೆ ಎಂಬ ಕೇಂದ್ರ ಸಚಿವರ ಹೇಳಿಕೆ ಸಮಾಜಕ್ಕೆ ಮಾರಕವಾಗಿದೆ. ಅವರು ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆದು ಸಾರ್ವಜನಿಕವಾಗಿ ಕ್ಷಮಾಪಣೆ ಕೋರಬೇಕು ಎಂದು ಜಿಲ್ಲಾ ಪರಿಶಿಷ್ಟ ಹೋರಾಟ ಸಮಿತಿಯ ಪ್ರಮುಖ ಹಾಗೂ ನಗರ ಯೋಜನಾ ಅಧ್ಯಕ್ಷ ಮಾಧವ ರೇವಣಕರ ಆಗ್ರಹಿಸಿದರು.

ಇಲ್ಲಿನ ಹುಬ್ಬಳ್ಳಿ ರಸ್ತೆಯಲ್ಲಿರುವ ಅಂಬೇಡ್ಕರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ , ವಿವಿಧ ಪರಿಶಿಷ್ಟ ಸಂಘಗಳ ಪರ ಮಾತನಾಡಿದ ಅವರು, ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುವುದರ ಜೊತೆಗೆ ಜ್ಯಾತ್ಯಾತೀತವಾಗಿ ರಕ್ತದ ಪರಿಚಯ ಮಾಡಿಕೊಡುವುದು ಬೇಸರದ ಸಂಗತಿಯಾಗಿದೆ. ಸರ್ವರೂ ಸಮಾನರು ಎನ್ನುವುದು ಸಂವಿಧಾನದ ನೀತಿಯಾಗಿದೆ. ಅಂತಹ ಸಂವಿಧಾನವನ್ನು ಬದಲಿಸುತ್ತೇನೆ ಎಂದು ಹೇಳಿಕೆ ನೀಡಿದ ಸಚಿವರು ತಮ್ಮ ಮಾತನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

RELATED ARTICLES  ಪತ್ರಿಕಾ ದಿನಾಚರಣೆ ಸ್ಪರ್ಧೆ: ಸೃಜನಾ, ಚಿತ್ರಾವತಿ ಪ್ರಥಮ

ಸಚಿವರ ಮಾತಿಗೆ ಕೇಂದ್ರ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅವರಿಗೂ ಸಹ ಸಂವಿಧಾನವನ್ನು ಬದಲಿಸುವ ವಿಚಾರ ಇದ್ದಿರಬಹುದು. ಇದು ಆಘಾತಕಾರಿ ಮತ್ತು ದೇಶದ್ರೋಹದ ಸಂಗತಿಯಾಗಿದೆ. ಈ ಹೇಳಿಕೆಯನ್ನು ಸಚಿವರು ಹಿಂಪಡೆದು ಕ್ಷಮೆ ಕೇಳದೇ ಹೋದಲ್ಲಿ ಬೀದಿಗಿಳಿದು ಉಗ್ರ ಹೀರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಇದನ್ನೇ ಮುಂದುವರೆಸಬೇಕು ಎಂದು ಸಚಿವರಿಗೆ ಇದ್ದಲ್ಲಿ ಅವರು ಸಂಸತ್ ಸದಸ್ಯತ್ವಕ್ಕೆ ರಾಜಿಮಾನೆ ನೀಡಿ ಹೋರಾಟ ಮುಂದುವರೆಸಲಿ ಎಂದು ಹೇಳಿದರು.‌
ಸಚಿವರು ನೀಡಿರುವುದು ಸಂವಿಧಾನ‌ ವಿರೋಧಿ ಹೇಳಿಕೆ ಆದ ಕಾರಣ ಅವರ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಹೋರಾಟ ಮಾಡುತ್ತೇವೆ. ರಾಜಕೀಯ ವ್ಯವಸ್ಥೆಯಲ್ಲಿ ಇದ್ದುಕೊಂಡು ಈ ರೀತಿಯ ವಿರೋಧಿ ಹೇಳಿಕೆಗಳು ಸರಿಯಲ್ಲ ಎಂದರು.

RELATED ARTICLES  ಬರ್ಗಿ ಪ್ರೌಢಶಾಲೆಯ ಶಾರದಾ ಪೂಜೆಯಲ್ಲಿ ಗುರುವಂದನೆ

ಈ ಸಂದರ್ಭದಲ್ಲಿ ಪ್ರಮುಖರಾದ ಶೈಲೇಶ ಜೊಗಳೇಕರ, ಲಕ್ಷ್ಮಣ ಮಾಳಕ್ಕನವರ್, ಅಮರ್ ನೆರಲಕಟ್ಟಿ, ಭೀಮಣ್ಣ ಭೋವಿವಡ್ಡರ್, ರಾಜೇಶ ನೇತ್ರೇಕರ, ಸುರೇಶ ಮುಂತಾದವರು ಇದ್ದರು.