ದಕ್ಷಿಣ ಏಷಿಯಾ ಮೂಲದಿಂದ ಬಂದ ಸೌತೆಕಾಯಿ ಈಗ ವಿಶ್ವವ್ಯಾಪಿ. ಜಗತ್ತಿನ ಎಲ್ಲ ಭಾಗಗಳಲ್ಲೂ ಬೆಳೆಯುವ ಸೌತೆಕಾಯಿ, ಆರೋಗ್ಯಪೂರ್ಣ ಜೀವನಕ್ಕೆ ಅತ್ಯಂತ ಸಮೃದ್ಧ ತರಕಾರಿ.  ಸಂಪೂರ್ಣ ಆರೋಗ್ಯಕ್ಕೆ ಅದರ ಸೇವನೆ ತುಂಬ ಸಹಕಾರಿ.  ಹಾಗಾದರೆ, ಸೌತೆಕಾಯಿಯ ವಿಶೇಷತೆಗಳನ್ನು ತಿಳಿಯಿರಿ.
  • ಪ್ರತಿಶತ ೯೦ರಷ್ಟು ನೀರಿನ ಅಂಶ ಹೊಂದಿದ ಸೌತೆಕಾಯಿ ನಿಮ್ಮ ದೇಹದ ನಿರ್ಜಲೀಕರಣವನ್ನು ಯಶಸ್ವಿಯಾಗಿ ನೀಗಿಸುತ್ತದೆ. ಶರೀರವನ್ನು ತಂಪುಗೊಳಿಸಿ ಮನಸ್ಸಿಗೆ ಉತ್ಸಾಹವನ್ನು ತುಂಬುತ್ತದೆ.  ಹೊಟ್ಟೆಯುರಿ, ಎದೆಯುರಿಗಳನ್ನು ಶಮನಗೊಳಿಸುತ್ತದೆ.
  •  ಸೌತೆಕಾಯಿ ಸೇವನೆ ತುಂಬ ಪರಿಣಾಮಕಾರಿ.  ನಿತ್ಯ ಸೇವನೆಯಿಂದ ನಿಮ್ಮ ತೂಕವನ್ನು ತಕ್ಕ ಮಟ್ಟಿಗೆ ಕಡಿಮೆಗೊಳಿಸಿಕೊಳ್ಳಬಹುದು.
  • ಸೌತೆಕಾಯಿ ಶರೀರದಲ್ಲಿನ ಅನುಪಯುಕ್ತ ಹಾಗು ವಿಷಕಾರಕ ವಸ್ತುಗಳನ್ನು ಹೊರಹಾಕುತ್ತದೆ
  • ನಿತ್ಯ ಸೇವನೆಯಿಂದ ಮೂತ್ರ ಪಿಂಡದಲ್ಲಿನ ಕಲ್ಲುಗಳು ಕರಗುತ್ತವೆ. 
  •  ಎದೆ, ಗರ್ಭಾಶಯ, ಅಂಡಾಶಯ, ಪ್ರಾಸ್ಟೇಟ ಮುಂತಾದ ಕ್ಯಾನ್ಸರ್‌ಗಳಿಗೆ, ಶರೀರ ಒಳಗಾಗುವದನ್ನು ಅದು ತಪ್ಪಿಸುತ್ತದೆ. ಈ ವಿಷಯವನ್ನು ಅನೇಕ ಸಂಶೋಧನೆಗಳು ದೃಢಪಡಿಸಿವೆ
  • ನಿಮ್ಮ ಬಾಯಿವಾಸನೆಗೆ ಸೌತೆಕಾಯಿಯ ತೆಳುವಾದ ಹೋಳನ್ನು ನಾಲಿಗೆಯ ಮೇಲೆ ಇಟ್ಟುಕೊಂಡು ಬಾಯಿಯ ಮೇಲಿನ ಅಂಗಳಕ್ಕೆ ಒತ್ತಿರಿ.  ಹಾಗೆಯೇ ಒಂದರ್ಧ ನಿಮಿಷ ಒತ್ತುತ್ತಿರಿ.  ಅದು ನಿಮ್ಮ ಬಾಯಲ್ಲಿನ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡುತ್ತದೆ.
  • ಸೌತೆಕಾಯಿಯಲ್ಲಿನ ಹೆಚ್ಚು ನೀರಿನ ಪ್ರಮಾಣ ಹಾಗು ಕಡಿಮೆ ಕ್ಯಾಲೋರಿಯಿಂದಾಗಿ ಅದು ಪಚನ ಕ್ರಿಯೆಗೆ ತುಂಬ ಅನಕೂಲಕರ.
  • ಸೌತೆಕಾಯಿಯಲ್ಲಿನ ನಾರಿನ ಅಂಶ ಮಲಬದ್ಧತೆಯಿಂದ ಬಳಲುವವರಿಗೆ ವರದಾನವಾಗಿದೆ.
  •  ಸಕ್ಕರೆ ಕಾಯಿಲೆಯಿಂದ ಬಳಲುವವರಿಗೆ ಅದು ಅತ್ಯಂತ ಉಪಯುಕ್ತ ಆಹಾರ.
  • ಸೌತೆಕಾಯಿ ರಸ ಇನ್ಸುಲಿನ್ ಉತ್ಪಾದಿಸಲು ಮೇದೋಜ್ಜೀರಕ ಗ್ರಂಥಿಗೆ ಸಹಾಯ ಮಾಡುತ್ತದೆ.  ಜೊತೆಗೆ ಅದು ದೇಹದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣವನ್ನು ತಗ್ಗಿಸಲು ತುಂಬ ಸಹಕಾರಿ.  
  • ಇದರಲ್ಲಿ ಪೊಟ್ಯಾಸಿಯಂ ಹಾಗು ಮ್ಯಾಗ್ನೇಸಿಯಂ ಇರುವದರಿಂದ ರಕ್ತದ ಒತ್ತಡವನ್ನು ಅದು ನಿಯತ್ರಿಸಬಲ್ಲದು.  ಹೆಚ್ಚು ಹಾಗು ಕಡಿಮೆ ರಕ್ತದ ಒತ್ತಡ ಉಳ್ಳವರಗೆ ಸೌತೆಕಾಯಿ ಸೇವನೆ ತುಂಬ ಪ್ರಯೋಜನಕಾರಿ.
  •  ಏಡ್ಸ ಮೊದಲಾದ ಕಾಯಿಲೆಗಳಿಂದ ಸೊರಗಿದವರಿಗೆ ಸೌತೆಕಾಯಿ ಅಮೃತ ಸಮಾನ.
  • ಬೆಳಿಗ್ಗೆ ಎದ್ದೊಡನೆ ತಲೆ ನೋಯುತ್ತಿದೆಯೇ?  ಕಣ್ಣಿಗೆ ಕತ್ತಲೆ ಬಂದಂತಾಗುತ್ತಿದೆಯೇ?  ದಿನವೂ ಸಂಜೆ ಒಂದಿಷ್ಟು ಸೌತೆಕಾಯಿ ಸೇವಿಸಿ.  ಅದರಲ್ಲಿರುವ ಸಕ್ಕರೆ, ಬಿ ಜೀವನಸತ್ವ, ಎಲೆಕ್ಟ್ರೋಲೈಟ ಮುಂತಾದವುಗಳು ನಿಮ್ಮ ದೇಹಕ್ಕೆ ಅವಶ್ಯ ಇರುವ ಪೋಷಕಾಂಶಗಳನ್ನು ಒದಗಿಸಿ ನಿಮ್ಮ ಸಮಸ್ಯೆಗಳನ್ನು ನೀಗಿಸಬಲ್ಲವು.
  •  ವಾತ ಪ್ರಕೋಪ, ಸಂದು-ಕೀಲು ನೋವುಗಳಲ್ಲೂ ಸೌತೆಕಾಯಿ ಸೇವನೆ ತುಂಬ ಪ್ರಯೋಜನಕಾರಿ.
  • ಚರ್ಮ ಉರಿ ಹಾಗು ಸನ್‌ಬರ್ನ್ಸಗಳಲ್ಲಿ ಸೌತೆಕಾಯಿ ರಸ ತುಂಬ ಪ್ರಯೋಜನಕ್ಕೆ ಬರುತ್ತದೆ.
  •  ಕಣ್ಣುಗಳ ಉರಿತ/ನೋವು ಇದ್ದರೆ ಕಣ್ಣು ಮುಚ್ಚಿ, ಕಣ್ಣಿನ ರೆಪ್ಪೆಯ ಮೇಲೆ ಸೌತೆಕಾಯಿಯ ಹೋಳುಗಳನ್ನು ಇಡಿ.  ಅದು ನಿಮ್ಮ ತೊಂದರೆಯನ್ನು ನಿವಾರಿಸಬಲ್ಲದು.
  • ಸವತೆಕಾಯಲ್ಲಿರುವ ಸಿಲಿಕಾನ್ ಹಾಗು ಸಲ್ಫರ್ ಕೇಶವರ್ಧನೆಗೂ ಸಹಕಾರಿ.
 

ಬರೀ ಆರೋಗ್ಯದ ವಿಷಯದಲ್ಲಿ ಮಾತ್ರ ಅಲ್ಲ ಬೇರೆ ವಿಷಯದಲ್ಲೂ ಸೌತೆಕಾಯಿಂದ ಪ್ರಯೋಜನ ಪಡೆಯಬಹುದು.

  • ನಿಮ್ಮ ಮನೆಯ ಕನ್ನಡಿ ಕಲೆಗಳಿಂದ ಮಂಕಾಗಿದ್ದರೆ, ಅದನ್ನು ಸೌತೆಕಾಯಿ ಹೋಳುಗಳಿಂದ ತಿಕ್ಕಿ ಸ್ವಚ್ಛಗೊಳಿಸಬಹುದು.
  •  ನಿಮ್ಮ ಮನೆಯ ಬಾಗಿಲು-ಕಿಡಕಿಗಳ ಹಿಂಜಿಸ್‌ಗಳು, ಮುಚ್ಚುವಾಗ ತೆರೆಯುವಾಗ ಕರ್ಣಕಠೋರವಾದ ಕೀಜಲು ಸ್ವರವನ್ನು ಹೊರಡಿಸುತ್ತಿದ್ದರೆ; ಸೌತೆಕಾಯಿ ಅದಕ್ಕೂ ಪರಿಹಾರ ನೀಡಬಲ್ಲದು.  ಹಿಂಜಿಸ್ಸುಗಳಿಗೆ ಸೌತೆಕಾಯಿ ರಸವನ್ನು ಸವರಿ.  ಬಾಗಿಲುಗಳು ಸದ್ದಿಲ್ಲದೇ ಮುಚ್ಚಿ ತೆರೆಯುತ್ತವೆ.
RELATED ARTICLES  ಕುಮಟಾದಲ್ಲಿ ವಿದ್ಯುತ್ ವ್ಯತ್ಯಯ : ಪ್ರಕಟಣೆ