ನ್ಯೂಯಾರ್ಕ್: ಬಾಳೆಹಣ್ಣು ಹಾಗೂ ಅವಕಾಡೋ(ಬೆಣ್ಣೆ ಹಣ್ಣು) ಹೃದಯ ಸಂಬಂಧಿ ಸಮಸ್ಯೆಗಳನ್ನು ದೂರವಿಡಲು ಸಹಕಾರಿ ಎಂಬುದು ಹೊಸ ಸಂಶೋಧನೆ ಮೂಲಕ ತಿಳಿದುಬಂದಿದೆ.

ಈ ಎರಡೂ ಹಣ್ಣುಗಳಲ್ಲಿ ಪೊಟ್ಯಾಸಿಯಮ್ ಅಂಶ ಹೆಚ್ಚಿದ್ದು ಹೃದಯ ನಾಳಗಳಷ್ಟೇ ಅಲ್ಲದೇ ಕಿಡ್ನಿ ಸಮಸ್ಯೆಗಳಿಗೂ ಉತ್ತಮ ಪರಿಹಾರ ಎಂದು ಸಂಶೋಧಕರು ಹೇಳಿದ್ದಾರೆ. ರಕ್ತನಾಳಗಳಲ್ಲಿ ಕ್ಯಾಲ್ಶಿಯಂ ಪ್ರಮಾಣ ಅಧಿಕವಾದಾಗ ಕ್ಯಾಲ್ಸಿಫಿಕೇಶನ್ ಉಂಟಾಗಿ ದೇಹದ ನೈಸರ್ಗಿಕ ಪ್ರಕ್ರಿಯೆಗಳಿಗೆ ಹಾನಿ ಉಂಟಾಗುತ್ತದೆ.

RELATED ARTICLES  ಬೆಳಗಿನ ಉಪಾಹಾರ ಸೇವಿಸದಿದ್ದರೆ ....? ‌

ಆದ್ದರಿಂದ ಹೆಚ್ಚಿನ ಪೊಟ್ಯಾಸಿಯಮ್ ಅಂಶ ಇರುವ ಪದಾರ್ಥಗಳನ್ನು ಸೇವಿಸಿದರೆ ಹೃದಯ ಸಂಬಂಧಿ ಸಮಸ್ಯೆಗಳನ್ನು ದೂರವಿಡಲು ಸಹಕಾರಿಯಾಗುತ್ತದೆ ಎಂದು ಅಧ್ಯಯನ ವರದಿ ಮೂಲಕ ತಿಳಿದುಬಂದಿದೆ. ಅಧ್ಯಯನ ವರದಿ ಜೆಸಿಐ ಇನ್ಸೈಟ್ ಜರ್ನಲ್ ನಲ್ಲಿ ಪ್ರಕಟಗೊಂಡಿದೆ.

RELATED ARTICLES  ಮೊಟ್ಟೆ ಬಳಸಿ ಕೂದಲು ಉದುರುವುದನ್ನು ತಡೆಯಬಹುದು! ಅದು ಹೇಗೆ ಗೊತ್ತಾ?