ಕುಮಟಾ : ನರೇಂದ್ರ ಮೋದಿಯವರ ಕನಸಾದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಹಳ್ಳಿ ಹಳ್ಳಿಗೂ ಯಶಸ್ವಿಯಾಗಿ ತಲುಪಿಸುವ ಗುರಿಯೊಂದಿಗೆ ಇಂದು ಹೆಗಡೆಯಲ್ಲಿ ಗ್ಯಾಸ್ ಕಿಟ್ ವಿತರಣಾ ಕಾರ್ಯಕ್ರಮ ನಡೆಯಿತು.

ಮಾಜಿ ಶಾಸಕರು ಮತ್ತು ಬಿಜೆಪಿ ಪ್ರಮುಖರಾದ ದಿನಕರ ಶೆಟ್ಟಿಯವರು ಫಲಾನುಭವಿಗಳಿಗೆ ಗ್ಯಾಸ್ ಕಿಟ್ ವಿತರಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿದ ಅವರು ಉಜ್ವಲ ಯೋಜನೆ ಬಡವರಿಗೆ ವರದಾನವಾಗಿದೆ. ಕಡುಬಡವರ ಮನೆಗಳಲ್ಲಿ ಕೂಡಾ ಎಲ್.ಪಿ.ಜಿ. ಗ್ಯಾಸ್ ಬಳಕೆಯಾಗಬೇಕು ಆ ಮೂಲಕ ಹೊಗೆಮುಕ್ತ ಮನೆ ನಿರ್ಮಾಣಗೊಂಡು ಉರುವಲುಗಳಿಂದ ಮಹಿಳೆಯರ ಸ್ವಾಸ್ಥ್ಯದ ಮೇಲೆ ಉಂಟಾಗುವ ದಿಷ್ಪರಿಣಾಮಗಳನ್ನು ತಪ್ಪಿಸುವ ಹಾಗೂ ಪರಿಸರ ನಾಶವನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಾರಿಗೆ ತಂದ ಪ್ರಧಾನಮಂತ್ರಿ ಉಜ್ವಲ ಯೋಜನೆ ಒಂದು ಮಹತ್ವಾಕಾಂಕ್ಷಿ ಯೋಜನೆಯಾಗಿದೆ.

RELATED ARTICLES  ರುಂಡವಿಲ್ಲದೆ ತೇಲಿಬಂತು ಶವ : ಕಂಗಾಲಾದ ಕುಮಟಾ ಜನತೆ..!

ಇಂತಹ ಜನಪರ ಯೋಜನೆಯನ್ನು ಬಡವರ ಮನೆಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ನಾವೆಲ್ಲ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದು ಬಡ ಫಲಾನುಭವಿಗಳು ಹಣ, ಸಮಯ ವ್ಯಯಿಸದೇ ಅಲೆದಾಟವಿಲ್ಲದೇ ಸುಲಭವಾಗಿ ಅವರ ಮನೆಯಂಗಳದಲ್ಲಿ ಗ್ಯಾಸ್ ಕಿಟ್ ಗಳನ್ನು ವಿತರಿಸುತ್ತಿದ್ದೇವೆ. ಗ್ಯಾಸ್ ಕಿಟ್ ಗಳನ್ನು ಪಡೆದುಕೊಂಡ ಫಲಾನುಭವಿಗಳ ಸಂತಸ ಕಂಡಾಗ ಸಂತಸವೆನಿಸುತ್ತದೆ.

RELATED ARTICLES  ಬಿಜೆಪಿಯ ಬೃಹತ್ ಸಾರ್ವಜನಿಕ ಸಭೆ ಉದ್ಘಾಟನೆ

ಬಡವರ ಪರವಾದ ಈ ಯೋಜನೆಯ ಸೌಲಭ್ಯವನ್ನು ಬಡವರಿಗೇ ತಲುಪಿಸಬೇಕೆಂದು ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತಿದ್ದೇವೆ. ಮುಂದಿನ ದಿನಗಳಲ್ಲೂ ಸರಕಾರ ಇಂತಹ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಲಿದ್ದು ಅವುಗಳನ್ನು ಸಹ ಅರ್ಹರಿಗೆ ತಲುಪಿಸುವ ನಿಟ್ಟಿನಲ್ಲಿ ನಾವು ಸದಾ ಮುಂಚೂಣಿಯಲ್ಲಿರುತ್ತೇವೆ ಎಂದರು.

ಈ ಸಂದರ್ಭದಲ್ಲಿ ಸುರೇಶ್ ಪಟಗಾರ,ಜಯಾ ಮುಕ್ರಿ. ರಾಜು ಮುಕ್ರಿ. ವೇಂಕಟೆಶ್ ನಾಯ್ಕ ಇನ್ನಿತರ ಪ್ರಮುಖರು ಹಾಜರಿದ್ದರು.