ಚಲನಚಿತ್ರ ನಟ ರಂಗಕರ್ಮಿ ಲೇಖಕ ಕಾಸರಗೋಡು ಚಿನ್ನಾ ಅವರಿಗೆ ಅರವತ್ತು ವರ್ಷ ತುಂಬಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಮಂಗಳೂರಿನಲ್ಲಿ ಚಿನ್ನಾ ೬೦ ರ ತಾರಾಲೋಕ ಎಂಬ ಕಾರ್ಯಕ್ರಮವನ್ನು ಪುರಭವನದ ಬಂಗಾರ ವೇದಿಕೆಯಲ್ಲಿ ಆಯೋಜಿಸಿದ್ದರು. ದಿನಾಂಕ 24 ರವಿವಾರ ಮದ್ಯಾಹ್ನ 2.30 ರಿಂದ ರಾತ್ರಿ 9ಗಂಟೆಯ ವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ಚಿನ್ನಾ ಅವರ ಬದುಕಿನ ಕುರಿತು ವಿವಿಧ ಗೋಷ್ಠಿ ಗಳು ಜರುಗಿದವು ನಂತರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಸಂಸ್ಕೃತಿ ಸಚಿವೆ ಉಮಾಶ್ರೀ ಉದ್ಘಾಟಕರಾಗಿ ಆಗಮಿಸಿದ್ದರು .

RELATED ARTICLES  ವಿದ್ಯಾರ್ಥಿಯ ಅಂತಃ ಸತ್ವದ ಅನಂತ ಸಾಧ್ಯತೆಯನ್ನು ಅನಾವರಣಗೊಳಿಸಲು ಶಿಕ್ಷಕನ‌ನ್ನು ಸಿಧ್ದಗೊಳಿಸುವುದೇ ಶಿಕ್ಷಕರ ತರಬೇತಿಯ ಮೂಲ ಉದ್ದೇಶ :ಪ್ರಮೋದ ಪಂಡಿತ

IMG 20171228 WA0003

ವೇದಿಕೆಯಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕರುಗಳಾಗಿರುವ ಗಿರೀಶ್ ಕಾಸರವಳ್ಳಿ. ಟಿ ಎಸ್ ನಾಗಾಭರಣ. ಸಂಗೀತ ನಿರ್ದೇಶಕರಾದ ವಿ ಮನೋರ ಮೊದಲಾದವರು ಉಪಸ್ಥಿತರಿದ್ದರು.

RELATED ARTICLES  ಅಧಿವೇಶನ ಬಿಟ್ಟು ಎಲ್ ಬಿ ಕಾಲೇಜಿಗೆ ಬಂದಿದ್ಯಾಕೆ ಹರತಾಳು ಹಾಲಪ್ಪ...?

ಚಿನ್ನಾ ಅವರ ಅಪಾರ ಅಭಿಮಾನಿಗಳು ಈ ಸಂದರ್ಭದಲ್ಲಿ ಅವರನ್ನು ಅಭಿನಂದಿಸಿದರು.ಉತ್ತರಕನ್ನಡದಿಂ ಮೀನುಗಾರ ಮುಖಂಡ ಜೈವಿಠ್ಠಲ ಕುಬಾಲ .ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಚಿದಾನಂದ ಭಂಡಾರಿ ಕಾಗಾಲ ಮೊದಲಾದವರು ಪಾಲ್ಗೊಂಡಿದ್ದರು.