ಹೊನ್ನಾವರ : ತೆಂಕು- ಬಡಗುತಿಟ್ಟಿನ ಅಗ್ರಮಾನ್ಯ ಭಾಗವತ ದಿ|| ಕಡತೋಕಾ ಮಂಜುನಾಥ ಭಾಗವತರ ಸ್ಮರಣಾರ್ಥ 23/12/2017 ರಿಂದ 27/12/2017 ರವರೆಗೆ 5 ದಿನಗಳ ಕಾಲ ಹಳದಿಪುರದಲ್ಲಿ ಕಡತೋಕಾ ಕೃತಿ-ಸ್ಮøತಿ ಯಕ್ಷ ರಂಗೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು.

IMG 20171228 WA0005 1

ಈ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಬಿ.ಜೆ.ಪಿ. ಪ್ರಮುಖರು ಹಾಗೂ ಗ್ರಾಮೀಣಾಭಿವೃಧ್ಧಿ ಟ್ರಸ್ಟ್ ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಅವರು ಉದ್ಘಾಟಿಸಿ ಮಾತನಾಡಿ ಕರಾವಳಿಯ ಗಂಡು ಮೆಟ್ಟಿದ ಕಲೆಯಾದ ಯಕ್ಷಗಾನವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಲವರು ಶ್ರಮಿಸುತ್ತಿದ್ದು ಅವರಲ್ಲಿ ಶ್ರೀಯುತ ಗೋಪಾಲಕೃಷ್ಣ ಭಾಗವತರು ಕೂಡಾ ಒರ್ವರು. ಅವರು ಯಕ್ಷಗಾನಕ್ಕೆ ಮೀಸಲಾದ ಯಕ್ಷರಂಗ ಎನ್ನುವ ವಿಶೇಷ ಮಾಸಪತ್ರಿಕೆ ಪ್ರಕಟಿಸುತ್ತಿದ್ದು ಆ ಮೂಲಕ ಯಕ್ಷಕ್ಷೇತ್ರದ ಆಗು- ಹೋಗು, ಸಮಕಾಲಿನ ವಿಷಯ, ಯಕ್ಷಗಾನ ಕಲೆಯ ಚೌಕಟ್ಟು ಮುಂತಾದ ವಿಚಾರಗಳ ಕುರಿತು ಜನರಿಗೆ ತಿಳಿಸುವ ಮತ್ತು ವಿಶ್ಲೇಷಿಸುವ ಕೆಲಸವನ್ನು ಸಮರ್ಪಕವಾಗಿ ನಡೆಸುತ್ತಾ ಬಂದಿದ್ದಾರೆ. ಜೊತೆಗೆ ಕೃತಿ-ಸ್ಮøತಿ ಶಿರ್ಷಿಕೆಯಡಿ ದಿ|| ಕಡತೋಕಾ ಮಂಜುನಾಥ ಭಾಗವತರ ಸ್ಮರಣಾರ್ಥ ಆರು ವರ್ಷಗಳಿಂದ ಈ ಕಾರ್ಯಕ್ರಮ ಜರುಗುತ್ತಿದ್ದು ಕಳೆದ ವರ್ಷ ತಾವೂ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಈ ವರ್ಷ ಕೂಡ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಉದ್ಘಾಟಿಸುವ ಅವಕಾಶ ದೊರೆತಿರುವುದು ಸಂತಸ ತಂದಿದೆ. ಹಾಗೂ ಮುಂದಿನ ವರ್ಷದಲ್ಲೂ ಪಾಲ್ಗೊಳ್ಳುವ ಆಶಾಭಾವ ಹೊಂದಿದ್ದೇನೆ ಎಂದು ನುಡಿದರು.

RELATED ARTICLES  ಸಂಭ್ರಮದಿಂದ‌ ಸಂಪನ್ನಗೊಂಡ ಕುಮಟಾ ಜಾತ್ರೆ.

ಯಕ್ಷಗಾನ ಸೇವಾ ನಿರತ ಸಂಸ್ಥೆ ಮೃತ್ರಿ ಕಲಾಬಳಗ ತೇಲಂಗಾರ್ ಹಾಗೂ ಯಕ್ಷಗಾನ ಛಾಯಾಚಿತ್ರ ಸಂಗ್ರಾಹಕರಾದ ಎಂ.ಎಸ್.ಭಟ್ ಹುತ್ತಾರ್ ಇವರಿಗೆ ಈ ಬಾರಿ ಪ್ರಶಸ್ತಿ ನೀಡಿ ಗೌರವಿಸುವುದು ಶ್ಲಾಘನೀಯ ಎಂದರು.

RELATED ARTICLES  ಹಿರೇಗುತ್ತಿ ಶ್ರೀ ಬ್ರಹ್ಮಜಟಕ ಯುವಕ ಸಂಘದ ಗಣರಾಜ್ಯೋತ್ಸವ ಧ್ವಜಾರೋಹಣ

IMG 20171228 WA0006

ಈ ಸಂದರ್ಭದಲ್ಲಿ ಪಿ.ಎಸ್. ಭಟ್ ಉಪ್ಪೊಣಿ, ಟಿ.ಎಸ್ ಹೆಗಡೆ ಕೊಂಡಕೇರೆ, ಎಮ್. ಕೆ. ಭಟ್, ಜೋಗಿಮನೆ ಮುಂತಾದವರು ಮಾತನಾಡಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರೊ. ಎಸ್. ಶಂಭು ಭಟ್ ಕಡತೋಕ ಅವರು ಮಾತನಾಡಿ ವಿವಿದ ರೀತಿಯ ಕಲೆಗಳಿದ್ದು ಎಲ್ಲಾ ಕಲಾವಿದರು ಎಲ್ಲಾ ಕಲೆಗಳನ್ನ ಆಸ್ವಾದಿಸುವ ಮತ್ತು ಗೌರವಿಸುವ ಮನೋಭಾವನೆಯನ್ನು ಹೊಂದಿರಬೇಕು ಎಂದರು.

ಶ್ರೀಯುತ ಗೋಪಾಲಕೃಷ್ಣ ಭಾಗವತರು ಸ್ವಾಗತಿಸಿ ವಂದಿಸಿದರು.