ಹೊನ್ನಾವರ : ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನ, ಸಾರ್ವಜನಿಕ ಶಿಕ್ಷಣ ಇಲಾಖೆ, ಇವರ ಸಂಯೋಜನೆಯಲ್ಲಿ ಶ್ರೀ ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನ ಇವರು ಕೃಷಿ ಜಯಂತಿಯ ಅಂಗವಾಗಿ ನಡೆಸುವ ಕೃಷಿ ರಸ ಪ್ರಶ್ನೆ ಕಾರ್ಯಕ್ರಮ ಹೊನ್ನಾವರದ ನ್ಯೂ ಇಂಗ್ಲಿಷ್ ಶಾಲೆಯಲ್ಲಿ ನಡೆಯಿತು.

RELATED ARTICLES  ಮಾ.17 ರಂದು ಹೊನ್ನಾವರದ ಹವ್ಯಕದಲ್ಲಿ ಮಲೆನಾಡು ಗಿಡ್ಡ ಹಬ್ಬ : ಸಂಯೋಜನೆಗೊಂಡಿದೆ ವೈವಿದ್ಯಮಯ ಕಾರ್ಯಕ್ರಮ.

ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಶಿವಾನಂದ ಹೆಗಡೆ ಕಡತೋಕಾ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಭಗವದ್ಗೀತೆ ಮಾನವನ ಬದುಕನ್ನು ಧನ್ಯತೆಯತ್ತ ಕೊಂಡೊಯ್ಯುತ್ತದೆ. ಮಾನವನಿಗಾಗಿ ದೇವರು ನೀಡಿದ ಗೀತೆಯ ಪಠಣ ಪ್ರತಿನಿತ್ಯ ನಡೆಯಬೇಕು ಎಂದರು.

RELATED ARTICLES  ನಿಂದಕನಿಗೆ ನಮನ ( ಕವನ - ಉಮೇಶ ಮುಂಡಳ್ಳಿ)

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನ್ಯೂ ಇಂಗ್ಲಿಷ್ ಸ್ಕೂಲ್ ನ ಆಡಳಿತ ಮಂಡಳಿಯ ಅಧ್ಯಕ್ಷರಾದ ಜೆ.ಟಿ ಪೈ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿಕ್ಷಣಾಧಿಕಾರಿಗಳಾದ ಗಿರೀಶ್ ಪದಕಿಯವರು ಉಪಸ್ಥಿತರಿದ್ದರು.

ಮಕ್ಕಳಿಗಾಗಿ ರಸಪ್ರಶ್ನೆ ಸ್ಪರ್ಧೆ ನಡೆಯಿತು.