ಕಾರವಾರ: ಪ್ರಶ್ನೆ ಮಾಡುವ ಮನಸ್ಥಿತಿ ಗ್ರಾಹಕರಲ್ಲಿ ಬರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ.ಗೋವಿಂದಯ್ಯ ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲಾಡಳಿತ, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವೇದಿಕೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ,ಕಾನೂನು ಮಾಪನ ಶಾಸ್ತ್ರ ಇಲಾಖೆ ಹಾಗೂ ಪ್ರೀಮಿಯರ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಹಕರು ಪ್ರಶ್ನೆ ಮಾಡದಿದ್ದರೆ ಸುಲಭವಾಗಿ ಮೋಸಹೋಗುತ್ತಾರೆ. ಆದ್ದರಿಂದ ಗ್ರಾಹಕರು ಪ್ರಶ್ನೆ ಮಾಡುವ ಮೂಲಕ ಸಂವಿಧಾನಬದ್ಧವಾಗಿ ಬಂದಿರುವ ತಮ್ಮ ಹಕ್ಕುಗಳನು ್ನಚಲಾಯಿಸಬೇಕು ಎಂದರು.

RELATED ARTICLES  ದಂಡಿ ಚಲನಚಿತ್ರ ಮುಹೂರ್ತ18ಕ್ಕೆ : ಹೊನ್ನಾವರದಲ್ಲಿ ಕಾರ್ಯಕ್ರಮ

ಯಾವುದೇ ವಸ್ತುಗಳನ್ನು ಖರೀದಿಸಿದರು ರಶೀದಿಯನ್ನು ಕಡ್ಡಾಯವಾಗಿ ಪಡೆಯಬೇಕು. ಮುಂದೆ ತಮ್ಮ ಹಕ್ಕುಗಳನ್ನು ಚಲಾಯಿಸಲುರಶೀದಿ ಮುಖ್ಯ ಪಾತ್ರವಹಿಸಲಿದೆ ಎಂದ ಅವರು, ತಮ್ಮ ಹಕ್ಕುಗಳನ್ನು ಚಲಾಯಿಸುವ ಮೂಲಕ ಸ್ವಚ್ಚಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.
ವಿಶೇಷ ಉಪನ್ಯಾಸ ನೀಡಿದ ನ್ಯಾಯವಾದಿ ಅನಿರುದ್ಧ ಹಳದೀಪುಕರ ಅವರು, ಪ್ರಸ್ತುತ ದಿನಗಳಲ್ಲಿ ಪ್ರಚಲಿರುವ ಡಿಜಿಟಲ್ ಮಾರ್ಕೆಟಿಂಗ್‍ನಲ್ಲಿ ವ್ಯವಹರಿಸುವ ಗ್ರಾಹಕರು ಎಚ್ಚರ ವಹಿಸುವುದು ಒಳಿತು ಎಂದರು.

ಆನ್‍ಲೈನ್ ಮಾರ್ಕೆಟಿಂಗ್‍ನಲ್ಲಿ ಗ್ರಾಹಕರಿಗೆ ಒಳಿತು ಮತ್ತು ಕೆಡಕುಗಳು ಇವೆ ಎಂಬುದನ್ನು ಅರಿಯಬೇಕು. ಆದರೆ ಯಾವುದೇ ಉತ್ಪನ್ನದ ಮಾದರಿ ಮತ್ತು ವಿವರಗಳನ್ನು ಹಾಗೂ ವ್ಯವಹಾರದ ಷರತ್ತುಗಳನ್ನುಗ್ರಾಹಕರು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಎಂದರು.

RELATED ARTICLES  ಬೊಲೆರೋ ಹಾಗೂ ರಾಜಹಂಸ ಬಸ್ ನಡುವೆ ಅಪಘಾತ

ಪ್ರೀಮಿಯರ್ ವಿಜ್ಞಾನಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಾಣಿ ಸತೀಶ್ ಅಧ್ಯಕ್ಷತೆ ವಹಿಸಿದ್ದರು. ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಬಿ.ರಘುನಾಥ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಹಿಮಂತರಾಜು ಜಿ., ಕಾನೂನು ಮಾಪನಶಾಸ್ತ್ರ ಇಲಾಖೆ ಸಹಾಯಕ ನಿರ್ದೇಶಕ ರಫೀಕ್ ಸಾಬ್ ಲಾಡಜಿ ಹಾಗೂ ನಿರೀಕ್ಷಕ ಫ್ರಾನ್ಸಿಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ರಾಜೇಶ್ ನಾಯ್ಕ್ ಉಪಸ್ಥಿತರಿದ್ದರು.