ಹೊನ್ನಾವರ: ತಾಲೂಕಿನ ಯಕ್ಷಗಾನ ಕಾಶಿ ಶ್ರೀ ಮುಖ್ಯಪ್ರಾಣ ಲಕ್ಷ್ಮೀವೆಂಕಟೇಶ ದೇವರ ಸನ್ನಿಧಿಯಲ್ಲಿ ಪ್ರತಿವರ್ಷದಂತೆ ಅಹೋರಾತ್ರಿ ಅಖಂಡ ಹರಿನಾಮ ಸಂಕೀರ್ತನೆಯ ಪುಣ್ಯಪಾವನ “ಭಜನಾ ಸಪ್ತಾಹ” ಕಾರ್ಯಕ್ರಮ ಡಿ. 29ರಂದು ಶುಕ್ರವಾರ ನಡೆಯಲಿದೆ.

RELATED ARTICLES  ಹೆಗಡೆಯ ಶ್ರೀ ಶಾಂತಿಕಾಂಬಾ ದೇವಿಯ ರಥೋತ್ಸವ ಇಂದು.

ಹೇಮಲಂಬಿ ನಾಮ ಸಂವತ್ಸರದ ಪುಷ್ಯ ಶುದ್ಧ ಏಕಾದಶಿ ನಿಮಿತ್ತ ದೇವರ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕೈಂಕರ್ಯ ನಡೆಯಲಿದ್ದು, ಬೆಳಿಗ್ಗೆ 9 ಗಂಟೆಗೆ ದೇವತಾ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ ವಿವಿಧ ಭಜನಾ ತಂಡದವರಿಂದ ಭಜನಾ ಸಪ್ತಾಹ ಸೇವೆ ನಡೆಯಲಿದೆ. ಎಂದು ದೇವಸ್ಥಾನದ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಇಂದು ಅಂಗಾರಕ ಸಂಕಷ್ಟಿ