ಶಿರಸಿ : ಇಲ್ಲಿನ ಇನ್ನೆರ್ವ್ಹೀಲ್ ಕ್ಲಬ್‍ನಿಂದ ನಗರದ ರೋಟರಿ ಸೆಂಟರ್ ಆವರಣದಲ್ಲಿ ತರಾವರಿ ಆಕರ್ಷಕ ಸೇವಂತಿಗೆಗಳ ಮೇಳವನ್ನು ಏರ್ಪಡಿಸಿದ್ದು ಗ್ರಾಹಕರ ಗಮನ ಸೆಳೆಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕ್ಲಬ್ ಅಧ್ಯಕ್ಷೆ ಮಧುಮತಿ ಹೆಗಡೆ,ಗ್ರಾಮೀಣ ಭಾಗದ ಮಹಿಳೆಯರು ತಯಾರಿಸಿದ ಸೇವಂತಿಗೆ ಬೆಳೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಪ್ರದರ್ಶನ ಮಾರಾಟ ಆಯೋಜಿಸಲಾಗಿದೆ ಎಂದು ತಿಳಿಸಿದರು.

RELATED ARTICLES  ಆಕ್ಸಿಜನ್ ಸಿಲಿಂಡರ್ ತುಂಬಿದ್ದ ಮಿನಿ ಲಾರಿ ಪಲ್ಟಿ

40ಕ್ಕೂ ಅಧಿಕ ತರಾವರಿ ಸೇವಂತಿಗೆಗಳ ಜಾತ್ರೆ ಆಗಿತ್ತು. ಸುಮಾರು 500 ಉತ್ತಮ ಸಸಿಗಳು ಹೂ ತೋಟ ಪ್ರಿಯರ ಗಮನ ಸೆಳೆದವು. ಕ್ಲಬ್ ಕಾರ್ಯದರ್ಶಿ ಪ್ರತಿಮಾ ಸ್ವಾದಿ,ಪೂರ್ಣಿಮಾ ಭಟ್,ರಾಜಲಕ್ಷ್ಮಿ ಹೆಗಡೆ,ಲತಾ ಹೆಗಡೆ,ಶಾಂತಾ ಕುರ್ಸೆ,ಆಶಾ ಪೈ,ಉಷಾ ಭಟ್ ಮುಂತಾದವರು ಭಾಗವಹಿಸಿದ್ದರು.

RELATED ARTICLES  ಕೊಂಕಣದಲ್ಲಿ ಕೊಂಕಣಿ ಸಾಂಸ್ಕøತಿಕ ಸ್ಪರ್ಧಾ ಕಾರ್ಯಕ್ರಮ