ಮೂಡಲಗಿ: ಸುಂದರವಾಗಿ ನಿರ್ಮಾಣಗೊಂಡಿರುವ ಅಂಬೇಡ್ಕರ್ ಭವನವನ್ನು ವಿವಿಧ ಸಾಮಾಜಿಕ ಕಾರ್ಯಗಳಿಗಾಗಿ ಬಳಕೆ ಮಾಡಿಕೊಳ್ಳುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಗ್ರಾಮಸ್ಥರನ್ನು ಕೋರಿದರು.

ಇಲ್ಲಿಗೆ ಸಮೀಪದ ಬೈರನಟ್ಟಿ ಗ್ರಾಮದಲ್ಲಿ ಗುರುವಾರದಂದು ಜರುಗಿದ 15 ಲಕ್ಷ ರೂ ಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಅಂಬೇಡ್ಕರ್ ಭವನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಹಿಂದಿನ ಬಿಜೆಪಿ ಸರಕಾರವಿದ್ದಾಗ ಎಸ್ಸಿ ಮತ್ತು ಎಸ್ಟಿ ಸಮುದಾಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಎಸ್.ಸಿ.ಪಿ ಟಿ.ಎಸ್.ಪಿ ಯೋಜನೆಯಡಿ ಸಾಕಷ್ಟು ಅನುಧಾನ ನೀಡಿತ್ತು. ಅರಭಾಂವಿ ಕ್ಷೇತ್ರ ಒಂದರಲ್ಲಿಯೇ 54 ಕೋಟಿ ರೂ. ಗಳ ಅನುಧಾನದಲ್ಲಿ ಈ ಜನಾಂಗಗಳ ಅಭಿವೃದ್ಧಿ ಹಿನ್ನೆಲೆಯಲ್ಲಿ ಕೋಟ್ಯಾಂತರ ರೂ.ಗಳ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಬೈರನಟ್ಟಿ ಗ್ರಾಮಕ್ಕೆ ಅಗತ್ಯವಿರುವ ಸರಕಾರಿ ಆಸ್ಪತ್ರೆಗೆ ವೈಧ್ಯಾಧಿಕಾರಿಗಳನ್ನು ನಿಯೋಜನೆ ಮಡಲಾಗುವದು. ಅರ್ಹ ಬಡ ಕುಟುಂಬಗಳನ್ನು ಗುರುತಿಸಿ ಅಂತಹವರಿಗೆ ವಸತಿ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಗ್ರಾಮ ಪಂಚಾಯತಿ ಸಮಿತಿಗೆ ಸೂಚಿಸಿದರು. ಯಾವುದೇ ಫಲಾನುಭವಿಗಳಿಂದ ದುಡ್ಡು ಪಡೆಯದೇ ಪ್ರಾಮಾಣಿಕವಾಗಿ ಅರ್ಹರಿಗೆ ಸೌಲಭ್ಯಗಳನ್ನು ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೈರನಟ್ಟಿ ಗ್ರಾಮವನ್ನು ಬಹಿರ್ದೆಸೆ ಮುಕ್ತ ಗ್ರಾಮವಾಗಿ ನಿರ್ಮಿಸಲು ಸಹಕರಿಸಬೇಕು. ಸಮಾಜದ ಪ್ರಗತಿಯಲ್ಲಿ ಶಿಕ್ಷಣವೇ ಪ್ರಮುಖ ಅಸ್ತ್ರವಾಗಿದ್ದು, ಪ್ರತಿಯೊಬ್ಬರೂ ಶೈಕ್ಷಣಿಕವಾಗಿ ಮುಂದೆ ಬರುವಂತೆ ಕೋರಿದರು. ಯುವಕರಲ್ಲಿಯೂ ಜಾಗೃತಿ ಮೂಡಿದ್ದು, ಯಾವುದೂ ಸರಿ ? ಯಾವುದೂ ತಪ್ಪು ? ಎಂಬುದರ ಅರಿವು ಮೂಡುತ್ತಿದೆ. ಇದಕ್ಕೆ ಶಿಕ್ಷಣವೇ ಕಾರಣ. ಅಭಿವೃದ್ಧಿ ಕೆಲಸ ಬಂದಾಗ ಹಿರಿಯರ ಮಾತಿನಂತೆ ಮುನ್ನಡೆದು ಗ್ರಾಮಾಭಿವೃದ್ಧಿಗೆ ದುಡಿಯುವಂತೆ ಕರೆ ನೀಡಿದರು.

RELATED ARTICLES  ಮಳೆಯ ಅಬ್ಬರಕ್ಕೆ ನಲುಗಿದ ಮಂಗಳೂರು: ಮುಂದುವರಿಯಲಿದೆ ಕರಾವಳಿಯಲ್ಲಿ ವರುಣನ ಆರ್ಭಟ

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ 2016-17 ಸಾಲಿನ ನರೇಗಾ ಹೊಂದಾಣಿಕೆ ಅನುಧಾನದಲ್ಲಿ ತಲಾ 8 ಲಕ್ಷ ರೂ ಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಎರಡು ಅಂಗನವಾಡಿ ಕಟ್ಟಡಗಳನ್ನು ಉದ್ಘಾಟಿಸಿದರು.

RELATED ARTICLES  ದ್ವಾದಶ ರಾಶಿಗಳ ದಿನ ಭವಿಷ್ಯ ತಿಳಿದು ಈ ದಿನ (ದಿ 08/12/2018)ರ ಕಾರ್ಯಗಳನ್ನು ಯೋಜಿಸಿ.

ರುದ್ರಯ್ಯ ಸ್ವಾಮಿಗಳು ಹಾಗೂ ಕೃಷ್ಣಾನಂದ ಸ್ವಾಮಿಗಳು ಸಾನಿಧ್ಯವಹಿಸಿದ್ದರು. ಎ.ಪಿ.ಎಮ್.ಸಿ ಮಾಜಿ ಅಧ್ಯಕ್ಷ ಎ.ಟಿ.ಗಿರಡ್ಡಿ, ಮುಖಂಡ ಎ.ಎ.ಪರುಶೆಟ್ಟಿ, ಗಿರೆಪ್ಪ ಈರಡ್ಡಿ, ರಾಯಪ್ಪ ಬಾನಸಿ, ಪ್ರಕಾಶ ಸನದಿ, ಬಸು ಖಿಲಾರಿ, ರಾಮನಗೌಡ ಪಾಟೀಲ, ಭೀಮಶಿ ಕಾರದಗಿ, ರಂಗಪ್ಪ ಪಾಟೀಲ, ಗೋಪಾಲ ಬಿಳ್ಳೂರ, ಪ್ರಕಾಶ ಪಾಟೀಲ, ಜಂಬು ಚಿಕ್ಕೋಡಿ, ಬುಜಬಲಿ ಉಪ್ಪಿನ, ಮೂಡಲಗಿ ಸಿ.ಡಿ.ಪಿ.ಒ ವಾಯ್.ಎಮ್.ಗುಜನಟ್ಟಿ, ಭೂ ಸೇನಾ ನಿಗಮದ ಎಇಇ ನಾರಾಯಣಕರ, ಪ್ರ.ಗು ಆರ್.ಎಮ್.ಮಹಾಲಿಂಗಪೂರ ಮುಂತಾದವರು ಉಪಸ್ಥಿತರಿದ್ದರು.