ಕುಮಟಾ :ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಜಿಲ್ಲಾಡಳಿತ ಉತ್ತರ ಕನ್ನಡ, ಕಾರವಾರ ಹಾಗೂ ಮಂಜುನಾಥ ಗ್ರಾಮೀಣ ಮಹಿಳಾ ಆರೋಗ್ಯ ವಿದ್ಯಾ ಹಾಗೂ ಪರಿಸರ ಅಭಿವೃದ್ಧಿ ಸಂಸ್ಥೆ(ರಿ.) ಸಹಯೋಗದೊಂದಿಗೆ ಕುಮಟಾದ ಪುರಭವನದಲ್ಲಿ “ಮದ್ಯ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಜನಜಾಗೃತಿ ಕಾರ್ಯಕ್ರಮ”ನಡೆಯಿತು.
ಈ “ಮದ್ಯ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಜನಜಾಗೃತಿ ಕಾರ್ಯಕ್ರಮ”ವನ್ನು ಕುಮಟಾ -ಹೊನ್ನಾವರ ಕ್ಷೇತ್ರದ ಶಾಸಕರು ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಉದ್ಘಾಟಿಸಿದರು.
ನಂತರ ಮಾತನಾಡಿದ ಶಾಸಕರು ಮದ್ಯ ಹಾಗೂ ಮಾದಕ ವಸ್ತುಗಳು ಜನತೆಯ ಜೀವಕ್ಕೆ ಹಾಗೂ ಜೀವನಕ್ಕೆ ಮಾರಕವಾಗಿದೆ. ಬದುಕನ್ನು ಬರಡಾಗಿಸುವ ಈ ದುಷ್ಟ ಚಟಗಳಿಂದ ದೂರವಿರಬೇಕಾದ ಬಗ್ಗೆ ಇಂದಿನ ಯುವಜನತೆ ಹಾಗೂ ಸಮಸ್ತ ಸಾರ್ವಜನಿಕರೂ ಚಿಂತಿಸುವ ಅಗತ್ಯತೆ ಇದೆ ಎಂದರು.
ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸುವಂತಹ ಇಂತಹ ಕಾರ್ಯಕ್ರಮ ಅಗತ್ಯವಾಗಿದೆ. ಜನತೆ ಸಾಮರಸ್ಯ ಹಾಗೂ ಸದೃಢ ಬದುಕು ರೂಪಿಸುಕೊಳ್ಳಲು ಈ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಕುಮಟಾ ಪುರಸಭೆಯ ಅಧ್ಯಕ್ಷರಾದ ಮದುಸೂದನ ಶೇಟ್, ತಾಲೂಕಾ ವೈದ್ಯಾಧಿಕಾರಿ ಆಜ್ನಾ ನಾಯ್ಕ ಹಾಗೂ ಇನ್ನಿತರ ಗಣ್ಯರು ಹಾಜರಿದ್ದರು.
ನೂರಕ್ಕೂ ಹೆಚ್ಚಿನ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಿಂತನ ಮಂಥನ ನಡೆಸಿದರು.