ಪರೇಶ್ ಮೇಸ್ತನ ಸಾವಿಗೆ ನ್ಯಾಯ ಕೊಡಿಸುವಂತೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಬಿಜೆಪಿ ಹೊನ್ನಾವರದ ತಾಲೂಕಾ ಘಟಕದ ವತಿಯಿಂದ ಹೊನ್ನಾವರ ಶರಾವತಿ ವೃತ್ತದಿಂದ ತಹಶೀಲ್ದಾರ್ ಕಚೇರಿಯವರೆಗೆ ಮೆರವಣಿಗೆಯ ಮೂಲಕ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿಯನ್ನು ಸಲ್ಲಿಸಲಾಯಿತು.

ಪರೇಶ್ ಮೇಸ್ತನ ಸಾವಿಗೆ ನ್ಯಾಯ ಒದಗಿಸಿಕೊಡಬೇಕು ಹಾಗೂ ಅವರ ಕುಟುಂಬಕ್ಕೆ ಪರಿಹಾರ ಒದಗಿಸುವ ಕೆಲಸ ಮಾಡಬೇಕು ಹಾಗೂ ಈ ಘಟನೆಯಲ್ಲಿ ಬಂಧಿಸಲಾದ ಅಮಾಯಕ ಹಿಂದೂಗಳನ್ನು ತಕ್ಷಣ ಬಿಡುಗಡೆಗೊಳಿಸಬೇಕು. ಕೋಮು ಗಲಭೆಗೆ ಕಾರಣವಾದವರನ್ನು ಭಂಡಿಸಿ ಶಿಕ್ಷೆ ಒದಗಿಸಬೇಕು. ಜೊತೆಯಲ್ಲಿ ಸಿ. ಪಿ.ಐ ಕುಮಾರಸ್ವಾಮಿಯವರನ್ನು ಕರ್ತವ್ಯದಿಂದ ವಜಾ ಗೊಳಿಸಬೇಕು ಭಟ್ಕಳ ಪುರಸಭೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರಾಮಚಂದ್ರ ನಾಯ್ಕ ಅವರ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

RELATED ARTICLES  ಭಾರತ್ ಬಂದ್ ಹಿನ್ನೆಲೆ : ಕುಮಟಾದಲ್ಲಿಯೂ ಮೆರವಣಿಗೆ ಮೂಲಕ ಮನವಿ ಸಲ್ಲಿಕೆ

ಈ ಸಂದರ್ಭದಲ್ಲಿ ತಾಲೂಕಾ ಅಧ್ಯಕ್ಷ ಸುಬ್ರಾಯ ನಾಯ್ಕ್, ವಿನೋದ ನಾಯ್ಕ್, ಲೋಕೇಶ್ ಮೇಸ್ತ, ಶಿವರಾಜ್ ಮೇಸ್ತ ಮುಂತಾದವರು ಪಾಲಿಗೊಂಡಿದ್ದರು.