ಕುಮಟಾ : ನ್ಯಾಯದ ಮೂಲಕ ಪರೇಶ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬಿಜೆಪಿ ಮುಖಂಡರು ಮತ್ತು ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಅಭಿಪ್ರಾಯ ಪಟ್ಟರು. ಅವರು ಪರೇಶ ಮೇಸ್ತಾ ಸಾವಿಗೆ ನ್ಯಾಯ ಸಿಗಬೇಕು ಹಾಗೂ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಿಸಬೇಕೆಂದು ಆಗ್ರಹಿಸಿ ಬಿಜೆಪಿಯ ಕ್ರಾರ್ಯಕರ್ತರು ಹಾಗೂ ಪ್ರಮುಖರೊಂದಿಗೆ ಕುಮಟಾದಲ್ಲಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಸತ್ವಾಧಾರ ನ್ಯೂಸ್ ಜೊತೆ ಮಾತನಾಡಿದರು.

ಈ ಹಿಂದೆ ಹೊನ್ನಾವರದಲ್ಲಿ ನಡೆದ ಘಟನೆಗಳು ಈಗಲೂ ಮನಸ್ಸಿನಲ್ಲಿ ಅಚ್ಚುಳಿದಿದ್ದು ನೋವು ತರುತ್ತಿದೆ. ಪರೇಶನ ಆ ಜೀವ ಬಲಿಯಾಗಿರುವುದು ಅವನ ಕುಟುಂಬಕ್ಕೆ ಹಾಗೂ ಸಮಾಜಕ್ಕೆ ಆಘಾತವನ್ನೇ ತಂದೆರಗಿದ್ದು ಸತ್ಯ. ಈ ಘಟನೆ ನಡೆಯಬಾರದಿತ್ತು ಎನ್ನುತ್ತ ಅವರು ಭಾವುಕರಾದರು.

ಪರೇಶ್ ಸಾವಿನ ನಂತರದಲ್ಲಿ ನಡೆದ ಘಟನಾವಳಿಗಳನ್ನು ಅವಲೋಕಿಸಿದರೆ ಹಿಂದು ಕಾರ್ಯರ್ತರ ಅದರಲ್ಲೂ ಅಮಾಯಕ ಹಿಂದೂ ಕಾರ್ಯಕರ್ತರನ್ನು ಬಂಧಿಸುವ ಕೆಲಸ ನಡೆದಿದ್ದು ಖೇಧಕರ ಸಂಗತಿಯಾಗಿದೆ. ಸಾವಿಗೆ ನ್ಯಾಯ ಕೇಳಲು ಬಂದ ಕಾರ್ಯಕರ್ತರನ್ನು ಬಂಧಿಸಿ ಪೋಲೀಸರು ದೌರ್ಜನ್ಯ ನಡೆಸಿದಂತಿದೆ ಇದು ಸಮಾಜದ ಜನತೆಗೆ ಗೊಂದಲವನ್ನು ಉಂಟುಮಾಡಿದೆ ಎಂದರು.

RELATED ARTICLES  ಕಾರವಾರದಲ್ಲಿ ಹೊಟೇಲ್ ಹಾಗೂ ಫಾಸ್ಟ್ ಫುಡ್ ಮಳಿಗೆಗಳಿಗೆ ಭೇಟಿನೀಡಿ ಪರಿಶೀಲಿಸಿದ ಅಧಿಕಾರಿಗಳು

ಹಿಂದು ಕಾರ್ಯಕರ್ತ ಪರೇಶ್ ಮೇಸ್ತಾ ಸಾವನ್ನು ಖಂಡಿಸಿ ಶಾಂತಿಯುತ ಮೆರವಣಿಗೆ ನಡೆಯುತ್ತಿದ್ದರೂ ಜಿಲ್ಲಾಡಳಿತ ಮನವಿ ತಿರಸ್ಕರಿಸಿ ವಿನಾಕಾರಣ ಬಿಜೆಪಿ ಪ್ರಮುಖರನ್ನು ಬಂಧಿಸಿ ಜೊತೆಗೆ ಲಾಟಿ ಚಾರ್ಜ ಮಾಡುವ ಮೂಲಕ ಜನತೆಯನ್ನು ಉದ್ರಿಕ್ತಗೊಳಿಸಿದ ಪರಿಣಾಮ ಈ ಅಹಿತಕರ ಘಟನೆ ನಡೆದಿದೆ, ಪೋಲೀಸ್ ಇಲಾಖೆ ಸಂಯಮ ತೋರಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

FB IMG 1514542857972

ಪರೇಶ್ ಸಾವನ್ನು ನಾವು ಖಂಡಿಸುವ ಜೊತೆಗೆ ಅವರ ಕುಟುಂಬಕ್ಕೆ ಸಹಾಯ ಧನವನ್ನು ಒದಗಿಸಬೇಕು.

ನಮ್ಮ ರಾಜ್ಯ ನಾಯಕರಾದ ಶೋಭಾ ಕರಂದ್ಲಾಜೆ ಅವರ ಮೇಲೆ ದಾಖಲಿಸಿರುವ ಕೇಸ್ ವಾಪಸ್ ಪಡೆಯಬೇಕು .

ಅಮಾಯಕರನ್ನು ಬಂಧಿಸಿ ಸೆಕ್ಷನ್ 307 ಕೇಸು ದಾಖಲಿಸುವುದನ್ನು ಬಿಡಬೇಕು.

ಹತ್ಯೆಗೈದ ದಿನದಂದು ಮಾರಕಾಸ್ತ್ರ ಹಿಡಿದು ತಿರುಗಾಡುತ್ತಿದ್ದ ಐವರು ಮುಸ್ಲಿಂ ಜಿಹಾದಿ ಗಳಲ್ಲಿ ಒಬ್ಬರನ್ನು ಇನ್ನೂ ಬಂಧಿಸಿಲ್ಲ ಅವರನ್ನು ಕೂಡಲೇ ಬಂಧಿಸಬೇಕು .

RELATED ARTICLES  ಉತ್ತರ ಭಾರತದಿಂದ ಯಕ್ಷಗಾನ ಕಲಿಯಲು ಬಂದ ಉತ್ಸಾಹಿಗಳು : ವೇದಿಕೆ ಕಲ್ಪಿಸಿತು ಶ್ರೀಮಯ ಯಕ್ಷಗಾನ ರಂಗಶಿಕ್ಷಣ ಕೇಂದ್ರ, ಗುಣವಂತೆ

ಈಗಾಗಲೇ ಈ ಪ್ರಕರಣದಲ್ಲಿ ಜಾಮೀನು ಪಡೆದವರ ಮೇಲೆ ಅನಾವಶ್ಯಕ ಬೇರೆ ಬೇರೆ ಕೇಸ್ನಲ್ಲಿ ಸಿಲುಕಿಸಲು ಪ್ರಯತ್ನಿಸಿರುವುದನ್ನು ಕೈಬಿಡಬೇಕು .

ಈ ಎಲ್ಲ ಅಂಶಗಳನ್ನು ಗಮನಿಸಿ ಗೌರವಾನ್ವಿತ ರಾಜ್ಯಪಾಲರು ಈ ಪ್ರಕರಣದ ಕುರಿತು ಸರ್ಕಾರಕ್ಕೆ ಸೂಚನೆ ನೀಡಿ ಪೊಲೀಸ್ ದೌರ್ಜನ್ಯವನ್ನು ತಕ್ಷಣ ನಿಲ್ಲಿಸುವಂತೆ ಹಾಗೂ ಈಗಾಗಲೇ ಹೊನ್ನಾವರ ಶಿರಸಿ ಕುಮಟಾ ಕಾರವಾರ ತಾಲ್ಲೂಕುಗಳಲ್ಲಿ ಬಂಧಿಸಿರುವ ಅಮಾಯಕರ ಮೇಲಿನ ಕೇಸನ್ನು ವಾಪಸ್ ಪಡೆದು ಕೂಡಲೇ ಬಿಡುಗಡೆಗೊಳಿಸುವಂತೆ ನಿರ್ದೇಶನ ನೀಡಬೇಕೆಂದು ವಿನಂತಿಸಿ ಈ ಮನವಿಯನ್ನು ನೀಡಲಾಗಿದೆ .

FB IMG 1514542880391

ಮನವಿಗೆ ಸ್ಪಂದಿಸದೇ ಇದ್ದರೆ ಉಗ್ರ ಹೋರಾಟಕ್ಕೆ ಇಳಿಯಬೇಕಾದ ಅನಿವಾರ್ಯತೆ ಇರುತ್ತದೆ ಎಂದು ಎಚ್ಚರಿಕೆಯನ್ನು ಕೂಡ ನೀಡಲಾಗಿದೆ .

ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಡಾಕ್ಟರ್ ಜಿ.ಜಿ ಹೆಗಡೆ , ಅಶೋಕ ಪ್ರಭು ಇನ್ನಿತರರು ಹಾಜರಿದ್ದರು.ನೂರಾರು ಕಾರ್ಯಕರ್ತರು ನಾಗರಾಜ ನಾಯಕ ತೊರ್ಕೆಯವರ ಜೊತೆ ಕಾಣಿಸಿಕೊಂಡು ಮನವಿ ನೀಡುವ ಸಂದರ್ಭದಲ್ಲಿ ಹಾಜರಿದ್ದರು.