ಕುಮಟಾ : ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಕುಮಟಾ ಹಾಗೂ ಸ.ಹಿ.ಪ್ರಾ.ಹೆಣ್ಣುಮಕ್ಕಳ ಶಾಲೆ ಹೆಗಡೆ ಸಹಭಾಗಿತ್ವದಲ್ಲಿ ವಿಶ್ವಮಾನವ ದಿನಾಚರಣೆ ನಡೆಯಿತು.

ಕಾರ್ಯಕ್ರಮದಲ್ಲಿ ಎಸ್,ಎಸ್ ಭಟ್ ಕುವೆಂಪುರವರ ಕುರಿತು ಉಪನ್ಯಾಸ ನೀಡಿದರು.ವಿಶ್ವಕ್ಕೆ ಮಾನವತೆಯ ಸಂದೇಶ ಸಾರಿದ ಕುವೆಂಪುರವರ ಕಾವ್ಯ ಹಾಗೂ ಕವಿತ್ವ ಜೊತೆಗೆ ಜೀವನ ಎಲ್ಲರಿಗೂ ಆದರ್ಶ ಎಂದರು.

RELATED ARTICLES  ಪಾರದರ್ಶಕತೆ ಸಾಮಾಜಿಕ ಉತ್ತರದಾಯಿತ್ವ ಉದ್ಯೋಗ ಖಾತ್ರಿ ಯಶಸ್ಸಿನ ಹಿಂದಿನ ಶಕ್ತಿಯಾಗಿದೆ-ಉಮೇಶ ಮುಂಡಳ್ಳಿ

ಕ.ಸಾ.ಪ ಅಧ್ಯಕ್ಷ ಡಾ.ಶ್ರೀಧರ ಗೌಡ ಉಪ್ಪಿನಗಣಪತಿ ಅಧ್ಯಕ್ಷ ತೆ ವಹಿಸಿದ್ದರು. ಶ್ರೀಮಂಗಲಾ ಹೆಬ್ಬಾರ ಅತಿಥಿಯಾಗಿ ಮಾತನ್ನಾಡಿದರು. ಶಿಕ್ಷಕರಾದ ಶ್ರೀಮತಿ ಶ್ಯಾಮಲಾ ಪಟಗಾರ, ನಾಗರಾಜ ಶೆಟ್ಟಿ, ರೇಣುಕಾ ನಾಯ್ಕ, ರಾಧಾ ನಾಯ್ಕ, ಸುಜಾತ ಪಟಗಾರ ಉಪಸ್ಥಿತರಿದ್ದರು.

RELATED ARTICLES  ಹೊತ್ತಿ ಉರಿದ ಟೈರ್ ರಿಮೋಡ್ ಘಟಕ: ಲಕ್ಷಾಂತರ ರೂ, ನಷ್ಟ

ವಿದ್ಯಾರ್ಥಿಗಳು ಕುವೆಂಪುರವರ ಕವನದ ಗೀತಗಾಯನ, ಹಾಗೂ ಕುವೆಂಪುರವರ ಕುರಿತು ಭಾಷಣ ಮಾಡಿದರು. ಶೋಭಿತಾ ಲಕ್ಷ್ಮಣ ನಾಯ್ಕ, ಶುಭಶ್ರೀ ನಾಯ್ಕ ಕಾರ್ಯಕ್ರಮ ರೂಪಿಸಿದರು. ಲಿಖಿತಾ ದೇವಿಕಾನ ವಂದಿಸಿದರು.